ಶಿವಮೊಗ್ಗ ಜೋನ್ ಅಂಡರ್ 16 ಕಿಕೆಟ್ ಪಂದ್ಯಾವಳಿ

ಶಿವಮೊಗ್ಗ : ಶಿವಮೊಗ್ಗ ಜೋನ್‌ನ ಅಂಡರ್ 16 ಬಾಲಕರ ಇಂಟರ್ ಕ್ಲಬ್ ಕ್ರಿಕೇಟ್ ಪಂದ್ಯಾವಳಿಗಳು ನಡೆಯುತ್ತಿವೆ. ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ, ಜೆಎನ್‌ಸಿಸಿ ಹಾಗೂ ಪೆಸಿಟ್ ಕಾಲೇಜಿನ ಕ್ರೀಡಾಂಗಣದಲ್ಲಿ ಈ ಪಂದ್ಯಾವಳಿಗಳು ನಡೆಯುತ್ತಿವೆ.

ಶಿವಮೊಗ್ಗ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕ್ರೀಡಾಪಟುಗಳು ಇಲ್ಲಿ ಭಾಗವಹಿಸಿದ್ದಾರೆ. ಪಂದ್ಯಾವಳಿಯಲ್ಲಿ ೧೬ ತಂಡಗಳು ಭಾಗಿಯಾಗಿವೆ. ಭಾನುವಾರ ಸೆಮಿಫೈನಲ್ ಪಂದ್ಯವಿರಲಿದ್ದು, ಸೋಮವಾರ ಫೈನಲ್ ಪಂದ್ಯ ನಡೆಯಲಿದೆ.