ಮಕ್ಕಳಿಗಾಗಿ ಬಿ ಫನ್ 

ಶಿವಮೊಗ್ಗ : ಇಲ್ಲಿನ ಶಿವಪ್ಪನಾಯಕ ಮಾಲ್‌ನಲ್ಲಿ ಮಕ್ಕಳ ಇಂಡೋರ್ ಗೇಮ್‌ಗಳು ಆರಂಭವಾಗಿದೆ. ಮಕ್ಕಳಿಗಾಗಿ ಬಿ ಫನ್ ಎಂಬ ಮನರಂಜನೆಯ ತಾಣವನ್ನು ಇಲ್ಲಿ ನಿರ್ಮಿಸಲಾಗಿದೆ. ಇಲ್ಲಿ 50 ಕ್ಕೂ ಹೆಚ್ಚೂ ಆಟಗಳನ್ನ ಇಡಲಾಗಿದೆ. 3 ವರ್ಷ ಮೇಲ್ಪಟ್ಟ ಮಕ್ಕಳು ಇಲ್ಲಿ ಆಟವಾಡಬಹುದಾಗಿದೆ. ಇಂಡೋರ್ ಕ್ರಿಕೆಟ್, ಹಾಕಿ, ಡ್ಯಾಶಿಂಗ್ ಕಾರ್, ಕಿಡ್ಡಿ ರೈಡ್ಸ್ ಹೀಗೆ ನಾನಾ ಆಟಗಳನ್ನು ಇಲ್ಲಿ ಆಡಬಹುದಾಗಿದೆ.

ಇಲ್ಲಿ ಒಂದು ಗಂಟೆ ಆಟವಾಡಲು 100 ರೂಪಾಯಿ ನಿಗದಿ ಪಡಿಸಲಾಗಿದೆ. ದಕ್ಷಿಣ ಕನ್ನಡದ ಸಿದ್ದಕ್ ಬ್ಯಾರಿ ಅವರಿಂದ ನಿರ್ಮಾಣಗೊಂಡಿರು ಈ ಬಿ ಫನ್ ತಾಣವನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಈ.ಕಾಂತೇಶ್, ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಉದ್ಘಾಟಿಸಿದರು.

ಈ ಸಂದರ್ಭದಲ್ಲಿ  ಪ್ರಮುಖರಾದ ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.