ನೀರಿನ ಸಮಸ್ಯೆ ಖಂಡಿಸಿ ಪ್ರತಿಭಟನೆ 

ಶಿವಮೊಗ್ಗ :  ನಗರದ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಬಿಜೆಪಿ ನಗರಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಪಾಲಿಕೆ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ, ನೀರು ಸರಬರಾಜು ಮಾಡಲು ಮಹಾನಗರ ಪಾಲಿಕೆ ಪ್ರತ್ಯೇಕ ಉಪವಿಭಾಗವನ್ನು ಆರಂಭಿಸಲು ನಿರ್ಣಯ ತೆಗೆದುಕೊಂಡು ತಿಂಗಳುಗಳೇ ಕಳೆದಿವೆ. ಆದರೆ ಇಲ್ಲಿಯವರೆಗೂ ಪ್ರತ್ಯೇಕ ಉಪವಿಭಾಗವನ್ನು ಆರಂಭಿಸಿಲ್ಲ. ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಸಲುವಾಗಿ ಅಗತ್ಯ ಸಿಬ್ಬಂದಿಗಳ ನೇಮಕ ಮಾಡಿಕೊಂಡಿಲ್ಲ. ಅಲ್ಲದೆ ಅವೈಜ್ಞಾನಿಕವಾಗಿ 24/7 ಕುಡಿಯುವ ನೀರಿಗೆ ತೆರಿಗೆ ವಿಧಿಸಲಾಗುತ್ತಿದೆ.  ಈ ರೀತಿ ಹಲವು ನೀರಿನ ಸಮಸ್ಯೆಗಳಿದ್ದು ಈ ಕುರಿತು ವಿಶೇಷ ಸಭೆಯನ್ನು ಆಯೋಜಿಸುವಂತೆ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.