ಶಿವಮೊಗ್ಗ : ವಿಶ್ವದಲ್ಲಿ ನಡೆಯುವ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಯುಪಿಎಸ್‌ಸಿ ಪರೀಕ್ಷೆ ಕೂಡ ಒಂದು. ಇಂತಹ ಕಠಿಣ ಪರೀಕ್ಷೆಯಲ್ಲಿ ೬೪೧ನೇ ರ್‍ಯಾಂಕ್ ಪಡೆದಿರುವ ಪ್ರಶಾಂತ್ ಶಿವಮೊಗ್ಗದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ನನ್ನ ಈ ಸಾಧನೆಯಿಂದ ಸಂತೋಷವಾಗಿದೆ. ಆದ್ರೆ ತೃಪ್ತಿಯಾಗಿಲ್ಲ. ಮತ್ತೊಮ್ಮೆ ಪರೀಕ್ಷೆಯನ್ನು ಬರೆಯುತ್ತೇನೆ ಅಂತಾರೆ ಪ್ರಶಾಂತ್. ಅವರ ಸಾಧನೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶಾಂತ್ ಮನೆಗೆ ಹೋಗಿ ಅವರನ್ನು ಭೇಟಿ ಮಾಡಿ ಸಿಹಿ ತಿನಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಅಂದ್ಹಾಗೆ ಎಲ್‌ಬಿಎಸ್ ನಗರದ ನಿವಾಸಿಯಾಗಿರುವ ಪ್ರಶಾಂತ್ ೨೦೨೦ರಲ್ಲಿ ಶಿವಮೊಗ್ಗ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಇವರ ತಂದೆ ಬಿ.ಓಂಕಾರಪ್ಪ, ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.