ಶಿವಮೊಗ್ಗ : ನೀವು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆಯಬೇಕಾ.. ಅಥವಾ ಚೆನ್ನೈಗೆ ಪ್ರಯಾಣ ಬೆಳೆಸಬೇಕಾ..? ಹಾಗಾದ್ರೆ ಇನ್ಮುಂದೆ ಶಿವಮೊಗ್ಗದಿಂದಲೇ ನೇರವಾಗಿ ರೈಲಿನ ಮೂಲಕ ತಿರುಪತಿ ಮತ್ತು ಚೆನ್ನೈಗೆ ತೆರಳ ಬಹುದು. ಏಪ್ರಿಲ್ 17 ರಿಂದ ಈ ರೈಲು ಸೇವೆ ಪುನಾರಂಭವಾಗಲಿದೆ.
ಶಿವಮೊಗ್ಗದಿಂದ ಭಾನುವಾರ ಹಾಗೂ ಮಂಗಳವಾರ ಸಂಜೆ 7 ಕ್ಕೆ ಹೊರಡಲಿದೆ. ಮರುದಿನ ಬೆಳಗ್ಗೆ 8.20ಕ್ಕೆ ತಿರುಪತಿಯ ಸಮೀಪದ ರೇಣಿಗುಂಟ ನಿಲ್ದಾಣ ತಲುಪಲಿದ್ದು, ಅಲ್ಲಿಂದ ಹೊರಟು 11.10ಕ್ಕೆ ಮದ್ರಾಸ್ ರೈಲು ನಿಲ್ದಾಣವನ್ನು ಈ ರೈಲು ತಲುಪಲಿದೆ. ಅದೇ ದಿನ ಮದ್ರಾಸ್‌ನಿಂದ ಸಂಜೆ 3.50ಕ್ಕೆ ಹೊರಡುವ ರೈಲು ರೇಣಿಗುಂಟಕ್ಕೆ ಸಂಜೆ 6.10 ಕ್ಕೆ ತಲುಪಿ ಮರುದಿನ ಬೆಳಿಗ್ಗೆ 7.55 ಕ್ಕೆ ಶಿವಮೊಗ್ಗ ತಲುಪಲಿದೆ. ಸದ್ಯ ಬದಲಾದ ಸಮಯದಿಂದ ರಾತ್ರಿ ಪ್ರಯಾಣದ ಮೂಲಕ ತಿರುಪತಿಯನ್ನು ತಲುಪಬಹುದಾಗಿದೆ. ಇದರಿಂದ ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ.