ಶಿವಮೊಗ್ಗ : 2008 ರಲ್ಲಿ ಆರಂಭವಾದ ಸ್ಟೈಲ್ ಡ್ಯಾನ್ಸ್ ಗ್ರೂಪ್ ನೃತ್ಯ ಸಂಸ್ಥೆಯು 14 ವರ್ಷವನ್ನು ಪೂರೈಸಿದೆ. ಈ ಹಿನ್ನೆಲೆ ಸಂಸ್ಥೆಯ ಒಳಾಂಗಣವನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದ್ದು ಇದರ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಲಿದೆ.
ಈ ವೇಳೆ ಉದ್ಘಾಟಕರಾಗಿ ಅವದೂತ ಶ್ರೀ ವಿನಯ್ ಗುರೂಜಿ ಆಗಮಿಸಲಿದ್ದಾರೆ. ಹಾಗೆಯೇ ಸಂಸ್ಥೆಯ ಗೌರವಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಅಧ್ಯಕ್ಷ ಕೆ.ಈ.ಕಾಂತೇಶ್ ಕೂಡ ಆಗಮಿಸಲಿದ್ದಾರೆ. ವಿಶೇಷವಾಗಿ ಉದ್ಘಾಟನೆಯ ದಿನದಂದು ಹೊಸದಾಗಿ ನೃತ್ಯ ತರಗತಿಗಳಿಗೆ ಸೇರ ಬಯಸುವರಿಗೆ ಶುಲ್ಕದಲ್ಲಿ ಶೇಕಡಾ ೫೦ ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ವತಿಯಿಂದ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.