ಶಿವಮೊಗ್ಗ : ಶಿವಮೊಗ್ಗ ಸ್ಮಾರ್ಟ್‌ಸಿಟಿಯ ಒಟ್ಟು 60 ಕಾಮಗಾರಿಗಳಲ್ಲಿ 31 ಕಾಮಗಾರಿಗಳು ಪೂರ್ಣವಾಗಿದೆ. ಉಳಿದ 29 ಕಾಮಗಾರಿಗಳು ವಿವಿಧ ಹಂತದಲ್ಲಿದ್ದು, ಈ ವರ್ಷದ ಅಂತ್ಯದಲ್ಲಿ ಶೇಕಡಾ 95 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಸ್ಮಾರ್ಟ್‌ಸಿಟಿ ಎಂಡಿ ಚಿದಾನಂದ ವಟಾರೆ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಮಾರ್ಟ್‌ಸಿಟಿ ಯೋಜನೆಗೆ 758.31 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ವಿವಿಧ ಕಾಮಗಾರಿಗೆ 541.88 ಕೋಟಿ ವೆಚ್ಚ ಮಾಡಲಾಗಿದೆ. ಕೋವಿಡ್‌ನಿಂದಾಗಿ ಕಾರ್ಮಿಕರು ಹಾಗೂ ಮೂಲ ಸೌಕರ್ಯಗಳ ಕೊರತೆಯಾಗಿದ್ದರಿಂದ ಯೋಜನೆಯು ವೇಗವನ್ನು ಕಳೆದುಕೊಂಡಿತು. ಹೀಗಾಗಿ ಕೇಂದ್ರ ಸರ್ಕಾರವು ಕೂಡ ಯೋಜನೆಯ ಕಾಲಾವಧಿಯನ್ನು 2023ರ ಜೂನ್‌ವರೆಗೆ ವಿಸ್ತರಿಸಿದೆ. ಈವರೆಗೆ ಶೇಕಡಾ 67.28ರಷ್ಟು ಭೌತಿಕ ಹಾಗೂ ಶೇಕಡಾ 54.18 ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.