ಭ್ರಷ್ಟ ಅಧಿಕಾರಿಗಳು ಹಾಗೂ ಗುತ್ತಿಗಾದರರ ವಿರುದ್ಧ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ನಾಗರೀಕ ಹಿತರಕ್ಷಣಾ ವೇದಿಕೆ

ಶಿವಮೊಗ್ಗ :  ಸ್ಮಾಟ್‌ಸಿಟಿ ಯೋಜನೆ ಸದಾ ಸುದ್ದಿಯಲ್ಲಿರುತ್ತದೆ. ಅದರಲ್ಲಿಯೂ ಕಾಮಗಾರಿಯ ಯಡವಟ್ಟಿನಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತದೆ. ಹೌದು ಸ್ಮಾರ್ಟ್‌ಸಿಟಿ ಕಾಮಗಾರಿ ಯೋಜನೆಯಡಿ ಮಾಡಲಾಗಿರುವ ನೆಹರು ರಸ್ತೆಯಲ್ಲಿನ ಫುಟ್ಪಾತ್ ಕಾಮಗಾರಿ ಕಳಪೆಯಾಗಿದೆ.

ಕಾಮಗಾರಿ ನಡೆದು ಐದಾರು ತಿಂಗಳಲ್ಲೇ ಫುಟ್ಪಾತ್‌ಗೆ ಹಾಕಿರುವ ಟೈಲ್ಸ್‌ಗಳು ಕುಸಿದಿವೆ. ಹಾಗೆಯೇ ಸಿಮೆಂಟ್ ಕಾಮಗಾರಿಯು ಅವೈಜ್ಞಾನಿಕವಾಗಿದೆ. ಹೀಗಾಗಿ ಕಾಮಗಾರಿ ಮಾಡಿರುವ ಭ್ರಷ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಆಗ್ರಹಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.