ಶಿವಮೊಗ್ಗ : ಅಲ್ಲಿನ ಜನ್ರು ಮನೆಯಿಂದ ಹೊರ ಬರೋದಕ್ಕೂ ಆಗೋದಿಲ್ಲ.. ಪಕ್ಕದ ಮನೆಗೂ ಹೋಗೋದಕ್ಕೂ ಆಗೋದಿಲ್ಲ. ಒಂದು ವೇಳೆ ಮೆಡಿಕಲ್ ಎಮರ್ಜೆನ್ಸಿ ಬಂದ್ರೂ ಕಥೆ ಅಷ್ಟೇ.. ಅರೆ ಏನಪ್ಪ ಸಮಸ್ಯೆ.. ಮಳೆ ಏನಾದ್ರೂ ಬರ್ತಾ ಇದೆಯಾ.. ಏನ್ ಕಥೆ.. ಅಂತೀರಾ.. ಖಂಡಿತಾ ಅಲ್ಲ. ಮಹಾನಗರ ಪಾಲಿಕೆಯವರ ಯಡವಟ್ಟು. ಎರಡು ಮನೆ ಯುಜಿಡಿ ಪ್ರಾಬ್ಲಂ ಸರಿ ಮಾಡೋಕೆ ಹೋಗಿ 600 ಜನರಿಗೆ ತೊಂದರೆಯಾಗುವಂತೆ ಆಗಿದೆ.
ಉಪ ಮೇಯರ್ ಗನಿ ಶಂಕರ್ ವಾರ್ಡ್‌ನಲ್ಲೇ ಈ ಹಣೆಬರಹ. ಅಂದ್ಹಾಗೆ ಇದು ಸೀಗೆಹಟ್ಟಿಯ ಮಾಕಮ್ಮನ ಬೀದಿ. ಹಲವಾರು ದಿನಗಳಿಂದ ಈ ಸಮಸ್ಯೆಯಾಗಿದೆ. ಇದೀಗ ಮಳೆ ಬೇರೆ ಆರಂಭವಾಗಿರೋದ್ರಿಂದ ಮೆನಯವರು ಅಪ್ಪಿತಪ್ಪಿ ಮನೆಯಿಂದ ಹೊರ ಬಂದ್ರೆ ಕೈಕಾಲು ಮುರಿದುಕೊಳ್ಳಬಹುದು. ಒಂದು ವೇಳೆ ವಯಸ್ಸಾದವರಾದರೇ ಪ್ರಾಣಕ್ಕೆ ಕುತ್ತು ಬರೋ ಸಾಧ್ಯತೆಗಳೇ ಇವೆ. ಬರೋಬ್ಬರಿ 20 ದಿನಗಳೇ ಕಳೆದಿವೆ. ಮಹಾನಗರ ಪಾಲಿಕೆಯವರೇ ಹೇಳಬೇಕು. ಯಾವಾಗ ಕಾಮಗಾರಿ ಮುಗಿಯುತ್ತೆ ಅಂತ.
ಈ ಭಾಗದ ಜನರು ನಿತ್ಯ ಗೋಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕುಡಿಯೋ ನೀರಿಗೂ ಕುತ್ತು ಬಂದಿದೆ. ಕೊಚ್ಚೆಯೊಂದಿಗೆ ನೀರು ಮಿಕ್ಸ್ ಆಗಿ ಬರ್ತಾ ಇರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.