ರಣಮಳೆ ತಂದ ನೂರೆಂಟು ರಗಳೆ

ಶಿವಮೊಗ್ಗ :  ಜಿಲ್ಲೆಯ ಭದ್ರಾ ಡ್ಯಾಂ ಗರಿಷ್ಠ ಮಟ್ಟ ತಲುಪಿದ್ದು, ಕಳೆದ ಹಲವು ದಿನಗಳಿಂದ ನೀರು ಹೊರ ಬಿಡಲಾಗುತ್ತಿದೆ. ಜಲರಾಶಿ ಸೊಬಗು ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಆಗಮಸಿತ್ತಿದ್ದಾರೆ. ಆದರೆ ಡ್ಯಾಂ ನೀರಿನ ರಭಸಕ್ಕೆ ಸಮೀಪದಲ್ಲಿ ಭೂ ಕುಸಿತ ಉಂಟಾಗಿದ್ದು ತಡೆಗೋಡೆ ಕುಸಿದು ಬಿದ್ದಿದೆ. ದಿನದಿಂದ ದಿನಕ್ಕೆ ಭೂ ಕುಸಿತ ಹೆಚ್ಚಾಗುತ್ತಿದೆ. ಅಪಾಯಕಾರಿ ಸ್ಥಿತಿಯಲ್ಲಿದೆ. ಆದರೆ ಇಲ್ಲಿಯವರೆಗೂ ಸೂಕ್ತ ದುರಸ್ತಿ ಕಾಮಗಾರಿಯಾಗಲಿ, ಮುನ್ನೆಚ್ಚರಿಕೆ ಕ್ರಮವಾಗಲಿ ಕೈಗೊಂಡಿಲ್ಲ. ಪೊಲೀಸ್ ಇಲಾಖೆಯ ಬ್ಯಾರಿಕೇಡ್ ಕೂಡ ಕುಸಿದು ನದಿಗೆ ಬಿದ್ದಿದೆ ಎಂದು ಪ್ರವಾಸಿಗರು ದೂರಿದ್ದಾರೆ. ಡ್ಯಾಂನಿAದ ನೀರು ಹೊರಬಿಟ್ಟಿರುವ ಕಾರಣದಿಂದ ಭಾರೀ ಸಂಖ್ಯೆಯ ಪ್ರವಾಸಿಗರು ಡ್ಯಾಂ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ತಡೆಗೋಡೆ ಕುಸಿತವಾಗಿರುವ ಸ್ಥಳದ ಬಳಿಯೇ ಓಡಾಡುತ್ತಿದ್ದಾರೆ. ಕೊಂಚ ಹೆಚ್ಚಾ ಕಮ್ಮಿಯಾದರೂ ನದಿಗೆ ನಾಗರೀಕರು ನದಿಗೆ ಬೀಳುವ ಸಾಧ್ಯತೆಯಿದೆ. ತಕ್ಷಣವೇ ಭದ್ರಾ ಜಲಾಶಯ ಆಡಳಿತ ದುರಸ್ತಿ ಕಾರ್ಯ ನಡೆಸಬೇಕು. ಜೊತೆಗೆ ಸ್ಥಳದಲ್ಲಿ ಪ್ರವಾಸಿಗರ ಸಂಚಾರ ನಿರ್ಬಂಧಿಸಿ, ಸೂಕ್ತ ಬ್ಯಾರಿಕೇಡ್ ಮುನ್ನೆಚ್ಚರಿಕೆ ಫಲಕ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಮಹಾಮಳೆಗೆ ಜಿಲ್ಲೆಯಲ್ಲಿ ಮತ್ತೊಂದು ಬಲಿ

ತೀರ್ಥಹಳ್ಳಿ : ಶಿವಮೊಗ್ಗದಲ್ಲಿ ಮಳೆಯಿಂದಾಗಿ ಜೀವ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ತುಂಗಾ ನದಿಯಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ವರದಿ ಬಂದ ಬೆನ್ನಲ್ಲೆ ಇದೀಗ ತೀರ್ಥಹಳ್ಳಿ ಸುಳುಗೋಡಿನಲ್ಲಿ ಮಹಿಳೆಯೊಬ್ಬರು ತೋಟಕ್ಕೆ ಹೋಗಿದ್ದಾಗ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಭವಾನಿ ಶಂಕರನಾರಾಯಣ ಎಂಬ 52 ವರ್ಷದ ಮಹಿಳೆ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಬಾಳೆಹಿತ್ತಲು ಹಳ್ಳದಲ್ಲಿ ಕೊಚ್ಚಿಹೋಗಿದ್ದಾರೆ. ಭಾನುವಾರ ಬೆಳಗ್ಗೆ ತೋಟಕ್ಕೆ ಎಂದು ಹೋದವರು ಸಂಜೆಯಾದರೂ ಪತ್ತೆಯಾಗಿರಲಿಲ್ಲ. ಬಳಿಕ ರಾತ್ರಿ 11 ಗಂಟೆ ಸುಮಾರಿಗೆ ಮೃತದೇಹ ಪತ್ತೆಯಾಗಿದೆ.


ದೇಮ್ಲಾಪುರ ರಸ್ತೆಯ ಅವ್ಯವಸ್ಥೆ

ಹುಂಚದಕಟ್ಟೆ : ಸ್ವಾತಂತ್ರö್ಯ ಬಂದು 75 ವರ್ಷ ಕಳೆದ್ರೂ ಗ್ರಾಮೀಣ ಭಾಗದ ರಸ್ತೆಗಳು ನೆಟ್ಟಗೆ ಆಗಿಲ್ಲ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಂಬ್ಲೆಬೈಲು ಮಾದಲ ಮನೆ ಸಣ್ಣ ಮನೆ ಮಾರ್ಗವಾಗಿ ದೇಮ್ಲಾಪುರ ರಸ್ತೆಗೆ ಹೋಗುವಂತ ಮುಖ್ಯರಸ್ತೆ ಇಲ್ಲಿ ಹತ್ತು ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವಂತ ರಸ್ತೆ. ಈ ರಸ್ತೆಯ ಬದಿಯಲ್ಲಿ ಚರಂಡಿ ಇಲ್ಲದ ವ್ಯವಸ್ಥೆ ದುರಸ್ತಿ ಆಗದ ವ್ಯವಸ್ಥೆಯಿಂದ ಪ್ರತಿದಿನ ನೂರಾರು ಜನ ವಿದ್ಯಾರ್ಥಿಗಳು ಕಾಲೇಜು ಮತ್ತು ಶಾಲೆಗಳಿಗೆ ಹೋಗುವಾಗ ಇದೇ ರಸ್ತೆಯಲ್ಲಿ ಎದ್ದು ಬಿದ್ದು ಹೋಗುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದೇ ಮಾರ್ಗವಾಗಿ ರೈತರು ತಮ್ಮ ಅಗತ್ಯ ವಸ್ತುಗಳನ್ನ ಇಲ್ಲೇ ಸಾಗಿಸಬೇಕು. ಪ್ರತಿದಿನ ಡೈರಿಗೆ ಹೋಗುವಂತ ರೈತರು ಹಾಲನ್ನ ಚೆಲ್ಲಿಕೊಂಡು ಹೋಗ್ತಾರೆ. ಇದುವರೆಗೂ ಜನ ಪ್ರತಿನಿಧಿಗಳು ಕೂಡ ಇದರ ಬಗ್ಗೆ ಗಮನ ಹರಿಸಿಲ್ಲ. ಕಳೆದ 25 ವರ್ಷಗಳಿಂದಲೂ ಈ ಸಮಸ್ಯೆ ಇದೆ. ಆದರೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳದೇ ಇರೋದು ದುರಂತವೇ ಸರಿ.


ಅಪಾಯ ಮಟ್ಟಿ ಮೀರಿ ಹರಿಯುತ್ತಿರುವ ವರದಾ ನದಿ

ಸೊರಬ : ರಣಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಸೊರಬ ತಾಲೂಕಿನಲ್ಲಿಯೂ ಭಾರಿ ಮಳೆಯಾಗ್ತಾಯಿದ್ದು ಸಾಕಷ್ಟು ಹಾನಿ ಸಂಭಿಸಿದೆ. ಅಲ್ಲದೆ ಇಲ್ಲಿನ ವರದಾ ನದಿಯಿಂದಾಗಿ ಅನೇಕ ಕಡೆ ಕೃಷಿ ಜಮೀನು ನೀರಿನಲ್ಲಿ ಜಲಾವೃತವಾಗಿದೆ. ಸೊರಬದ ಶಕುನವಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ತುಯಿಲುಕೊಪ್ಪ ಗ್ರಾಮದಲ್ಲಿ ವರದಾ ನದಿಯು ರೈತರಿಗೆ ಶಾಪದಂತೆ ಹರಿಯುತ್ತದೆ.  ನದಿ ಅಪಾಯ ಮಟ್ಟ ಮೀರಿರುವುದರಿಂದ ನೆರೆ ನಿರ್ಮಾಣವಾಗಿದ್ದು ಅಡಿಕೆ ತೋಟ, ರಸ್ತೆ ಎಲ್ಲವೂ ನೀರಿನಲ್ಲಿ ಮುಳುಗಡೆಯಾಗಿದೆ. ಈ ಹಿನ್ನೆಲೆ ಮಾಜಿ ಶಾಸಕ ಮಧು ಬಂಗಾರಪ್ಪ ಜಲಾವೃತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ನೆರೆಯಿಂದ ಸಂತ್ರಸ್ತರಾಗಿರುವವರಿಗೆ ಸಾಂತ್ವನ ಹೇಳಿದ್ರು.