ಶಿವಮೊಗ್ಗ : ಮೇ ತಿಂಗಳಲ್ಲಿ 70 ರಿಂದ 75 ಮಿಮಿ ಮಳೆಯಾಗುತ್ತಿತ್ತು ಆದರೆ ಈ ಮೇ ತಿಂಗಳಲ್ಲೇ ೨೫೦ ಮಿಮಿ ಮಳೆಯಾದ ಪರಿಣಾಮ ನೆರೆ ಉಂಟಾಗಿದೆ. 8 ರಿಂದ 10 ವಾರ್ಡ್ ಜಲವೃತವಾಗಿದ್ದು ಸಾಕಷ್ಟು ನಷ್ಟ ಉಂಟಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಮಳೆಯಿಂದಾಗಿ 7 ಮನೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 17 ಮನೆಗಳು ಬಿದ್ದಿವೆ. ಒಂದು ಸಾವು ಕೂಡ ಸಂಭವಿಸಿದೆ. ಶಿಕಾರಿಪುರ ಮತ್ತು ಸೊರಬದಲ್ಲಿ ಬೆಳೆ ಹಾನಿಯಾಗಿದೆ. ಎಲ್ಲಾ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿದ್ದು ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ಸೂಚಿಸಲಾಗಿದೆ. ಈಗಾಗಲೇ ೯ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.