ಶಿವಮೊಗ್ಗ : ರಾಗಿಗುಡ್ಡ ಪ್ರದೇಶವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಶಾಸಕ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ೭೪ ಅಡಿ ಎತ್ತರದ ಬೃಹತ್ ಶಿವಲಿಂಗ ಆಕಾರದ ದೇಗುಲವನ್ನು ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ಉzಶಿಸಿದ್ದು, ೫ ಕೋಟಿ ರೂಪಾಯಿ ಅನುದಾನವನ್ನು ಈಗಾಗಲೇ ನೀಡಿದೆ. ಹಾಲಿ ಗುಡ್ಡದ ಮೇಲಿರುವ ದೇವಾಲಯಗಳು ಈಶ್ವರ ಲಿಂಗದ ಒಳಭಾಗದಲ್ಲಿರಲಿವೆ. ಅಲ್ಲಿರುವ ೨ ಎಕರೆ ೨೦ ಗುಂಟೆ ಈ ಹಿನ್ನಲೆಯಲ್ಲಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಈಶ್ವರಪ್ಪ ಅವರು ಚರ್ಚೆ ನಡೆಸಿದರು. ಗುಡ್ಡದ ಮೇಲಿರುವ ೨ ಎಕರೆ ೨೪ ಗುಂಟೆ ಜಾಗವನ್ನು ಜಿಲ್ಲಾಡಳಿತವು ಯೋಜನೆಗೆಂದೇ ಬಿಟ್ಟುಕೊಡಲು ಮುಂದಾಗಿದೆ. ಸ್ಥಳ ಪರಿಶೀಲನೆಯ ನಂತರ ಸಚಿವ ಕೆ.ಎಸ್. ಈಶ್ವರಪ್ಪ ಅವರು ಉzಶಿತ ಯೋಜನೆಗಳ ಬಗ್ಗೆ ವಿವರ ನೀಡಿದರು.
ರಾಗಿಗುಡ್ಡ ಅಭಿವೃದ್ಧಿ ಕಾರ್ಯಕ್ಕೆ ವಿರೋಧ
ರಾಗಿಗುಡ್ಡದ ಮೇಲೆ ಹಾಲಿ ಇರುವ ದೇವಾಲಯಗಳನ್ನು ಕೆಡವಲು ಬಿಡುವುದಿಲ್ಲ ಅಂತ ಅಲ್ಲಿನ ಅರ್ಚಕರು ಹಾಗೂ ಅವರ ಕುಟುಂಬ ಹೇಳಿದೆ. ಏನೂ ಇಲ್ಲದ ಸಮಯದಲ್ಲಿ ನಮ್ಮ ಅಜ್ಜನ ಕಾಲದಲ್ಲಿ ಈ ದೇಗುಲಗಳನ್ನ ನಿರ್ಮಾಣ ಮಾಡಲಾಯ್ತು. ಒಂದೊಂದು ಕಲ್ಲನ್ನೂ ಸಹ ಹೊತ್ತುತಂದು ದೇವಾಲಯ ನಿರ್ಮಾಣ ಮಾಡಲಾಗಿದೆ. ಈಗ ಇವುಗಳನ್ನು ಕೆಡವಲು ಬಿಡುವುದಿಲ್ಲ ಅಂತ ಹೇಳಿದ್ದಾರೆ.