ಪರಮೇಶ್ವರಪ್ಪ ನೂತನ ಡಿಡಿಪಿಐ 

ಶಿವಮೊಗ್ಗ :  ನೂತನ ಡಿಡಿಪಿಐಯಾಗಿ ಪರಮೇಶ್ವರಪ್ಪ ನೇಮಕಗೊಂಡಿದ್ದಾರೆ. ಪರಮೇಶ್ವರಪ್ಪ ಅವರು ಚಿತ್ರದುರ್ಗದ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ರೀಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಶಿವಮೊಗ್ಗದ ಡಿಡಿಪಿಐ ಆಗಿದ್ದ ರಮೇಶ್ ನಿವೃತ್ತಿಯಾದ ಸ್ಥಾನಕ್ಕೆ ಪರಮೇಶರಪ್ಪ ನೇಮಕಗೊಂಡಿದ್ದಾರೆ. ಈ ಕುರಿತು ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅದೇಶ ಹೊರಡಿಸಿದ್ದರು. ಇದೀಗ ಇವರು ಶಿವಮೊಗ್ಗ ಡಿಡಿಪಿಐ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.