ಜಿಲ್ಲೆಯ ಪ್ರಮುಖ ಜಲಾಶಯಗಳ ಒಳ ಹರಿವು ಹೆಚ್ಚಳ 

ಶಿವಮೊಗ್ಗ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ಜಲಾಶಯಗಳ ಒಳ ಹರಿವು ಪ್ರಮಾಣ ಕೂಡ ಹೆಚ್ಚಾಗಿದೆ. ತುಂಗಾ ಜಲಾಶಯ ಭರ್ತಿ ಆಗಿರುವುದರಿಂದ ಇಲ್ಲಿ ಹೊರ ಹರಿವು ಕೂಡ ದಾಖಲಾಗಿದೆ. ಜಲಾಶಯಕ್ಕೆ ಸದ್ಯ ೧೧,೯೭೬ ಕ್ಯೂಸೆಕ್ ಒಳ ಹರಿವು ಇದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಇನ್ನುಳಿದಂತೆ ಯಾವ್ಯಾವ ಜಲಾಶಯದಲ್ಲಿ ಎಷ್ಟು ಪ್ರಮಾಣದ ನೀರಿದೆ ಅನ್ನೋದನ್ನು ನೋಡೋದಾದ್ರೆ, ಲಿಂಗನಮಕ್ಕಿ ಜಲಾಶಯಕ್ಕೆ ೧೧ ಸಾವಿರದ ೧೨೫ ಕ್ಯೂಸೆಕ್ ಒಳಹರಿವು ಇದೆ. ಜಲಾಶಯದ ಗರಿಷ್ಟ ಮಟ್ಟ ೧೮೧೯ ಅಡಿಯಿದ್ದು ಸದ್ಯ ೧೭೬೩.೬೫ ಅಡಿಯಷ್ಟು ನೀರಿದೆ. ಕಳೆದ ೨೪ ಗಂಟೆಯ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯ ವ್ಯಾಪ್ತಿಯಲ್ಲಿ ೫೪.೨ ಮಿಮೀ ಮಳೆಯಾಗಿದೆ. ಭದ್ರಾ ಜಲಾಶಯಕ್ಕೆ ೭೭೯೯ ಕ್ಯೂಸಕ್ ಒಳಹರಿವು ದಾಖಲಾಗಿದೆ. ಡ್ಯಾಂನ ಗರಿಷ್ಟ ಮಟ್ಟ ೧೮೬ ಅಡಿಯಿದ್ದು ಪ್ರಸ್ತುತ ೧೪೯.೭ ಅಡಿಯಷ್ಟು ನೀರಿದೆ.