ಶಿವಮೊಗ್ಗ : ಸುಮಾರು 130 ವರ್ಷಗಳ ಹಿಂದಿನ ಇತಿಹಾಸವಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಕಟ್ಟಡಕ್ಕೆ ಸದ್ಯದಲ್ಲಿಯೇ ಹೊಸ ರೂಪ ಸಿಗಲಿದೆ. ಹೌದು, ಸ್ಮಾರ್ಟ್‌ಸಿಟಿ ಯೋಜನೆಯ ಅಡಿಯಲ್ಲಿ ಕಟ್ಟಡದ ಮರುನವೀಕರಣಕ್ಕೆ ಪಾಲಿಕೆ ಮುಂದಾಗಿದೆ.
ಪುರಾತತ್ವ ಇಲಾಖೆಗೆ ಈ ಕಾರ್ಯವನ್ನು ವಹಿಸಲಾಗಿದ್ದು, ಸುಮಾರು 2 ಕೋಟಿ ಮೊತ್ತದ ಯೋಜನೆ ಇದಾಗಿದೆ. ಮುಂಬರುವ ದಸರಾ ಹಬ್ಬದೊಳಗೆ ಈ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಅಂತಾರೆ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ.