ಶಿವಮೊಗ್ಗ : ಮಹಾನಗರಪಾಲಿಕೆ ವತಿಯಿಂದ ಘನತ್ಯಾಜ್ಯ ವಿಲೇವಾರಿ ಹಾಗೂ ಒಳಚರಂಡಿ ಶುದ್ದೀಕರಣದ ಉಪಯೋಗಕ್ಕಾಗಿ ಸಹಕಾರಿಯಾಗುವಂತಹ ವಾಹನಗಳಿಗೆ ಚಾಲನೆ ನೀಡಲಾಗಿದೆ.ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ಖರೀದಿಸಲಾದ ವಾಹನಗಳಿಗೆ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಚಾಲನೆ ನೀಡಿದರು.
6 ಬ್ಯಾಟರಿ ಚಾಲಿತ ಲಘು ಘನತ್ಯಾಜ್ಯ ವಿಲೇವಾರಿ ಆಟೋಗಳು, 2 ಯುಜಿ.ಡಿ ಸಕ್ಕಿಂಗ್ ಕಂ ಜಟ್ಟಿಂಗ್ ಮಷೀನ್, 5 ಕ್ಯೂಬಿಕ್ ಸಾಮಥ್ರ್ಯದ ಟಿಪ್ಪರ್ ಲಾರಿಗಳು ಸೇರಿದಂತೆ ಒಟ್ಟು 13 ವಾಹನಗಳಿಗೆ ಚಾಲನೆ ನೀಡಲಾಗಿದೆ. ಈ ಎಲ್ಲಾ ವಾಹನಗಳು ನಗರಾದ್ಯಂತ ಇಂದಿನಿಂದಲೇ ಕಾರ್ಯಾರಂಭ ಮಾಡಲಿವೆ ಎಂದು ಪಾಲಿಕೆ ಮಹಾಪೌರರು ತಿಳಿಸಿದರು.
ಇನ್ನಾದರು ಶಿವಮೊಗ್ಗ ನಗರದ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಸಿಗುತ್ತಾ?, ಚಾಲನೆ ನೀಡಿರುವ ವಾಹನಗಳು ನಿತ್ಯವು ನಗರದ ಎಲ್ಲೆಡೆ ಸಂಚಾರ ಮಾಡಿ ಕಸ ಸಂಗ್ರಹಣೆಯನ್ನು ಸರಿಯಾಗಿ ಮಾಡ್ತಾರ ಎಂದು ಕಾದು ನೋಡಬೇಕು.