ಶಿವಮೊಗ್ಗ : 2022-23 ನೇ ಸಾಲಿನ ಆಸ್ತಿ ತೆರಿಗೆ ದರವನ್ನು ಹೆಚ್ಚಳ ಮಾಡದಂತೆ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಮಹಾನಗರ ವ್ಯಾಪ್ತಿಯಲ್ಲಿನ ನಿವೇಶನಗಳು ಹಾಗೂ ಕಟ್ಟಡಗಳಿಗೆ ಪ್ರತಿ ಮೂರು ವರ್ಷಕೊಮ್ಮೆ ಶೇ.15ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕೆಂಬ ನಿಯಮವಿದೆ. ಆದ್ದರಿಂದ ಈಗಾಗಲೇ 202-21, 2021-22 ಹಾಗೂ 2022-23ನೇ ಸಾಲಿಗೆ ಅನ್ವಯವಾಗುವಂತೆ ಶೇ.15 ರಷ್ಟು ಹೆಚ್ಚಿಸಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಲಾಗುತ್ತಿದೆ. ಈ ನಡುವೆ ಮತ್ತೆ ಹೊಸದಾಗಿ ಪೌರಾಡಳಿತದ ನಿರ್ದೇಶನಾಲಯದ ಸೂಚನೆಯಂತೆ ಶೇ.3 ಅಥವಾ 5 ರಷ್ಟು ತೆರಿಗೆ ವಸೂಲಿ ಮಾಡಿದರೆ ಅದು ಸಮಂಜಸವಾಗುವುದಿಲ್ಲ.
ಆದ್ದರಿಂದ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾವವನ್ನು 2022-23ನೇ ಸಾಲಿಗೆ ಕೈ ಬಿಡುವಂತೆ ಪಾಲಿಕೆ ವತಿಯಿಂದ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿದೆ.