ಮಾರಿ ಜಾತ್ರೆಗೆ ಸಾರ ಹಾಕುವ ಕಾರ್ಯಕ್ರಮಕ್ಕೆ ಚಾಲನೆ 

ಶಿವಮೊಗ್ಗ : ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಮಾರಿ ಜಾತ್ರೆಗೆ ಸಾರಾ ಹಾಕುವ ಕಾರ್ಯಕ್ರಮ ನಡೆಯಿತು. ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷ ಮರಿಯಪ್ಪ ಹಾಗೂ ಕಾರ್ಯದರ್ಶಿ ಎನ್.ಮಂಜುನಾಥ್ ಸಾರಾ ಹಾಕುವ ಕಾರ್ಯಕ್ರಮಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.

ಸಾರಾ ಎಂದರೆ ಜಾತ್ರೆ ಆರಂಭದ ಕುರಿತು ಡಂಗೂರ ಸಾರುವುದು. ತಮಟೆ ಬಾರಿಸುವ ಮೂಲಕ ಹಾಗೂ ಆಟೋದಲ್ಲಿ ಜಾತ್ರೆ ಆರಂಭದ ಕುರಿತು ಅನೌನ್ಸ್‌ಮೆಂಟ್ ಮಾಡುವ ಮೂಲಕ ಜಾತ್ರೆ ಸಾರಲಾಯಿತು. ನಾಲ್ಕು ಆಟೋಗಳ ಮೂಲಕ ನಗರದ 35 ವಾರ್ಡ್‌ನಲ್ಲಿ ಜಾತ್ರೆ ಮಾರ್ಚ್ 22ರಿಂದ 26ರವರೆಗೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಭಾಗುಯಾಗಬೇಕೆಂದು ಡಂಗೂರ ಸಾರಲಾಗುತ್ತಿದೆ.