7 ಗಂಟೆ ವಿದ್ಯುತ್ ನೀಡುವಂತೆ ಆಗ್ರಹಿಸಿ ಪ್ರತಿಭಟನೆ 

ಶಿವಮೊಗ್ಗ : ಸರ್ಕಾರವು ತನ್ನ ಆದೇಶದ ಪ್ರಕಾರ ರೈತರ ಪಂಪ್‌ಸೆಟ್‌ಗಳಿಗೆ ಹಗಲು 7 ಗಂಟೆ ವಿದ್ಯತ್ ನೀಡುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕೆಇಬಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದೆ.

ರಾಜ್ಯ ಸರ್ಕಾರದ ಇಂಧನ ಸಚಿವರು ದಿನದ 7 ಗಂಟೆ ರೈತರ ವಿದ್ಯತ್ ಪಂಪ್‌ಸೆಟ್‌ಗಳಿಗೆ ವಿದ್ಯತ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ದಿನಕ್ಕೆ ಸರಿಯಾಗಿ 4 ರಿಂದ ೫ ಗಂಟೆಯು ವಿದ್ಯುತ್ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು ಹಾಗು ಸುಟ್ಟುಹೋದ ಟಿಸಿಗಳನ್ನು 72 ಗಂಟೆಯೊಳಗೆ ಬದಲಿಸಿ ಕೊಡುವುದು, ಅವಶ್ಯಕತೆಯಿದ್ದರೆ ಹೊಸ ಟಿಸಿ ಅಳವಡಿಸುವುದು ಸೇರಿದಂತೆ ಹಲವು ಭೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿದರು.