ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವಕ, ಯುವತಿ ಮೇಲೆ ಯುವಕರ ಗುಂಪೊಂದು ನೈತಿಕ ಪೋಲಿಸ್‌ಗಿರಿ ನಡೆಸಿದ ಪ್ರಕರಣವೊಂದು ವರದಿಯಾಗಿದೆ.
ಚಿತ್ರದುರ್ಗದಿಂದ ತೀರ್ಥಹಳ್ಳಿಯ ಕುಪ್ಪಳಿಗೆ ತೆರಳಲು ಯುವಕ ಮತ್ತು ಯುವತಿ ಬಂದಿದ್ದಾರೆ. ಬಸ್ಸಿಗಾಗಿ ವಿಚಾರಿಸುತ್ತಿದ್ದಾಗ ಯುವಕರ ಗುಂಪೊಂದು ಇವರನ್ನು ಅಡ್ಡಗಟ್ಟಿದ್ದಾರೆ. ಗುಂಪಿನಲ್ಲಿ ಆರೇಳು ಯುವಕರಿದ್ದರು. ಯುವಕ, ಯುವತಿಯನ್ನು ಪ್ರಶ್ನೆ ಮಾಡಿರುವ ಗುಂಪು, ಯಾರು ನೀವು? ಇಲ್ಲಿಗೇಕೆ ಬಂದಿದ್ದೀರ? ಮುಸ್ಲಿಂ ಹುಡುಗಿಯನ್ನು ಯಾಕೆ ಕರೆದುಕೊಂಡು ಬಂದಿದ್ದೀಯ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಯುವಕನನ್ನು ತಳ್ಳಾಡಿದ್ದಾರೆ.
ಬಸ್ ನಿಲ್ದಾಣದಲ್ಲಿ ಜನರು ಗುಂಪುಗೂಡುತ್ತಿದ್ದಂತೆ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಿ.ಎಡ್ ಕೋರ್ಸ್‌ನ ಡಾಕ್ಯೂಮೆಂಟರಿ ಮಾಡುವ ಉದ್ದೇಶದಿಂದ ತಾವು ಕುಪ್ಪಳಿಗೆ ತೆರಳುತ್ತಿದ್ದೆವು. ಈ ವೇಳೆ ತಮ್ಮನ್ನು ಬೈದು, ತಳ್ಳಾಡಿದ ಯುವಕರ ಗುಂಪಿನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ನಡೆಸುತ್ತಿದ್ದಾರೆ.