ಈಶ್ವರಪ್ಪನವರ ಹುಚ್ಚರ ಒಂದು ಸಂಘವೇ ಇದೆ

ಶಿವಮೊಗ್ಗ : ಎ ಒನ್ ಆಗಿರೋ ಕೊಲೆಗಡುಕರು. ೪೦ ಪರ್ಸೆಂಟ್ ಕಮಿಷನ್ ಪಡೆದು, ಮಂತ್ರಿಗಿರಿ ಕಳೆದುಕೊಂಡಿದ್ದಾರೆ. ಇಂತಹ  ಈಶ್ವರಪ್ಪನವರ ಹುಚ್ಚರ ಒಂದು ಸಂಘವೇ ಇದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಗುಡುಗಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಅವರು, ಸಿದ್ದರಾಮಯ್ಯಗೆ ಹುಚ್ಚ ಮತ್ತು ಅಯೋಗ್ಯ ಎಂದಿರುವ ಈಶ್ವರಪ್ಪನವಿರಗೆ ತಿರುಗೇಟು ಕೊಟ್ರು. ಬಿಜೆಪಿಯಲ್ಲಿ ಹುಚ್ಚರ ಸಂಘವೇ ಇದೆ. ಇದರಲ್ಲಿ ಸಿಟಿ ರವಿ, ಹೊನ್ನಾಳಿ ರೇಣುಕಾಚಾರ್ಯ, ತೇಜಸ್ವಿ ಸೂರ್ಯ ಇದಾರೆ. ಎಒನ್ ಆರೋಪಿಯಾಗಿ ಜೈಲಿನಲ್ಲಿ ಇರಬೇಕಾದವರು ಬಾಯಿಗೆ ಬಂದಂತೆ ಮಾತಾಡ್ತಾ ಇದಾರೆ ಇದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೆಚ್.ಎಸ್. ಸುಂದರೇಶ್ ಹೇಳಿದ್ರು.