ಶಿವಮೊಗ್ಗ : ರಾಹುಲ್ ಗಾಂಧಿ ಇಡಿ ವಿಚಾರಣೆ ಯಾವಾಗಿನಿಂದ ಆರಂಭವಾಯ್ತೋ ಅಂದಿನಿಂದಲೂ ಕಾಂಗ್ರೆಸ್ ಕೇಂದ್ರದ ಕ್ರಮ ಖಂಡಿಸಿ ಹೋರಾಟ ಮಾಡುತ್ತಲೇ ಇದೆ. ಇದೀಗ ಶಿವಮೊಗ್ಗ ನಗರ ಆದಾಯ ತೆರಿಗೆ ಕಚೇರಿಗೆ ಜಿಲ್ಲಾ ಕಾಂಗ್ರೆಸ್ ಮುತ್ತಿಗೆ ಯತ್ನ ನಡೆಸಿದೆ.
ಚೌಕಿದಾರ್ ಚೋರ್ ಎಂದು ಕಾಂಗ್ರೆಸಿಗರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿದೆ. ಬಿಜೆಪಿ ಸುಳ್ಳು ಕೇಸು ಹಾಕಿ ಹೆದರಿಸುವ ನೀಚತನ ತೋರುತ್ತಿದೆ ಎಂದು ಆರೋಪಸಿದ್ದಾರೆ.
ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ೨ ಬಸ್‌ಗಳಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಕರೆದೊಯ್ದಿದ್ದಾರೆ.