ಏ.೧೮ಕ್ಕೆ ಬೆಲೆ ಏರಿಕೆ ಜಾಗೃತಿ ಜಾಥ 

ಶಿವಮೊಗ್ಗ : ರಾಜ್ಯದಲ್ಲಿ ಒಂದೆಡೆ ಕೋಮುಸಂಘರ್ಷಳು ಹೆಚ್ಚಾಗ್ತಾಯಿದ್ರೆ, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಾಗ್ತಾಯಿದೆ. ಆದ್ದರಿಂದ ಸರ್ವಧರ್ಮ ಸಮಾನತೆಯೊಂದಿಗೆ ಬೆಲೆ ಏರಿಕೆ ಜಾಗೃತಿ ಬಗ್ಗೆ ಜಾಗೃತಿ ಮೂಡಿಸಲು ಆಮ್ ಆದ್ಮಿ ಪಾರ್ಟಿ ಮುಂದಾಗಿದೆ.

ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಆಮ್ ಆದ್ಮಿ ಜಿಲ್ಲಾಧ್ಯಕ್ಷ ಮನೋಹರ್ ಗೌಡ, ರಾಜ್ಯದಲ್ಲಿ ಒಂದಲ್ಲ ಒಂದು ಕೋಮು ಸಂಘರ್ಷಗಳು ನಡೆಯುತ್ತಿದೆ. ಹಾಗೇ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ನಿತ್ಯವೂ ಜನರು ಸಂಕಷ್ಟ ಪಡುವಂತಾಗಿದೆ, ಆದ್ದರಿಂದ ಜನರಲ್ಲಿ ಸರ್ವಧರ್ಮ ಸಮಾನತೆಯ ಜೊತೆಗೆ ಬೆಲೆ ಏರಿಕೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 18 ರಂದು ನಗರದ ಖಾಸಗೀ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದವರೆ ಈ ಜಾಥ ನಡೆಯಲಿದೆ ಎಂದರು