ಶಾಂತಿ ನಗರದಲ್ಲಿ ವಾರಕ್ಕೆ ಒಂದು ದಿನ ನೀರು

ಶಿವಮೊಗ್ಗ : ನಗರದಲ್ಲಿ ಕುಡಿಯವ ನೀರಿನ ಸಮಸ್ಯೆ ಸದ್ಯಕ್ಕೆ ಮುಗಿಯುವ ಹಾಗೆ ಕಾಣ್ತಾಯಿಲ್ಲ. ಶಾಂತಿನಗರದಲ್ಲಿ ವಾರಕ್ಕೆ ಒಂದು ದಿನ ಮಾತ್ರ ನೀರು ಬರ್‍ತಾ ಇದ್ದು ಜನರ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಈ ಹಿನ್ನೆಲೆ ಆ ಭಾಗದ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಹಾಗೂ ನಿವಾಸಿಗಳು ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಧೀರರಾಜ ಹೊನ್ನವಿಲೆ ನದಿ ಪಕ್ಕದಲ್ಲಿ ಇದ್ದು ವಾರಕೊಮ್ಮೆ ನೀರು ಕೊಡ್ತಾರೆ ಅಂದ್ರೆ ಇದು ನಾಚಿಕೆಯಾಗುವಂತಹ ವಿಷಯ. ವಾಲ್ ಮ್ಯಾನ್‌ಗಳು ಹಾಗೂ ಮೇಸ್ತ್ರಿಗಳು ಮಾಡುವ ಯಡವಟ್ಟಿನಿಂದಾಗಿ ಅಧಿಕಾರಿಗಳು ಸಮಸ್ಯೆ ಅನುಭವಿಸಬೇಕಾಗಿದೆ ಎಂದರು.