ಶಾಂತಿನಗರದಲ್ಲಿ ಸಾರ್ವಜನಿಕರಿಂದ ದಿಢೀರ್ ಪ್ರತಿಭಟನೆ

ಶಾಂತಿನಗರದ ರಸ್ತೆ ದುರಸ್ತಿ ಕಾರ್ಯ ಮಾಡಬೇಕೆಂದು ಆಗ್ರಹಿಸಿ ಸಾರ್ವಜನಿಕರಿಂದ ದಿಢೀರ್ ಪ್ರಭಟನೆ ನಡೆಸಲಾಯಿತು. ಈ ವೇಳೆ ಪಾಲಿಕೆ ಸದಸ್ಯರ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ಕುರಿತಾಗಿ ಮಾತನಾಡಿದ ಶಾಂತಿನಗರ ನಾಗರಿಕ ಹಕ್ಕು ವೇದಿಕೆಯ ಅಧ್ಯಕ್ಷ ಎಸ್.ಮುಜೀಬ್, ಕಳೆದ 11 ವರ್ಷಗಳಿಂದ ಈ ಸಮಸ್ಯೆ ಆರಂಭವಾಗಿದೆ. ಇಲ್ಲಿನ ಮಹಾನಗರ ಪಾಲಕೆ ಸದಸ್ಯರಿಗೆ ಇಲ್ಲಿನ ರಸ್ತೆಗಳ ಕುರಿತಾಗಿ ಕಾಳಜಿ ಇಲ್ಲ. ರಸ್ತೆ ಸರಿಯಿಲ್ಲದೆ ಅಲ್ಲಿಂದ ಬರುವ ಧೂಳಿನಿಂದ ಶ್ವಾಸಕೋಶ ಬ್ಲಾಕ್ ಆಗಿ ಈಗಾಗಲೇ ನಾಲ್ಕು ಜನ ಮಣಿಪಾಲ್ ಆಸ್ಪತ್ರೆಗೆ ಹೋಗಿ ಬಂದಿದ್ದಾರೆ. ಈ ವಿಚಾರವಾಗಿ ಮಹಾನಗರ ಪಾಲಿಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ರು. ಜೊತೆಗೆ ಆದಷ್ಟು ಬೇಗ ರಸ್ತೆಯನ್ನ ಸರಿಪಡಿಸದೆ ಇದ್ದರೆ ಮಹಾನಗರ ಪಾಲಿಕೆಗೆ ಬೀಗ ಹಾಕುವುದಾಗಿ ಎಚ್ಚರಿಸಿದ್ರು.