ಶಿವಮೊಗ್ಗ: ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ಎಷ್ಟು ಸ್ಮಾರ್ಟ್ ಆಗಿ ನಡೀತಾ ಇದೆ ಗೊತ್ತಾ? ನೀವು ಈ ದೃಶ್ಯ ನೋಡಿದ್ರೆ ನಿಮಗೇ ಅನ್ಸುತ್ತೆ ಎಷ್ಟು ಸ್ಮಾರ್ಟ್ ಅಂತ.
ಹೌದು, ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅವರ ಮನೆ ಹಿಂದೆ ಸ್ಮಾರ್ಟ್ ಸಿಟಿ ಕಾಮಗಾರಿ ಮಾಡಲಾಗಿದೆ. ಈ ಕಾಮಗಾರಿಗೆ ಸ್ಕೆಚ್ ಹಾಕಿ ಕೊಟ್ಟಿರೋ ಇಂಜಿನಿಯರ್ ಹಾಗೂ ಗುತ್ತಿಗೆದಾರನಿಗೆ ಶಹಬ್ಬಾಸ್‌ಗಿರಿ ಕೊಡಲೇಬೇಕು. ಅಷ್ಟರ ಮಟ್ಟಿಗೆ ಇದೆ ಈ ಕಾಮಗಾರಿ. ಏನ್ರೀ ಇದು? ಸಾರ್ವಜನಿಕರ ದುಡ್ಡು ಅಂದ್ರೆ ಅಷ್ಟು ನೆಗ್ಲೆಕ್ಟಾ ಇವ್ರಿಗೆ? ಹೀಗೆ ಬೇಕಾಬಿಟ್ಟಿ ಕಾಮಗಾರಿ ಮಾಡಲು ಇವರಿಗೆ ಪರ್ಮಿಷನ್ ಕೊಟ್ಟೋರು ಯಾರು? ಗಟಾರದಲ್ಲಿ ಹೋಗ್ತೀರೋ ಕೊಚ್ಚೆ ನೀರಲ್ಲಿ ಯಾರಾದ್ರೂ ಕಾಂಕ್ರೀಟ್ ಹಾಕಿ ಚರಂಡಿ ದುರಸ್ತಿ ಮಾಡ್ತಾರೇನ್ರೀ? ಇದೇನಾ ಸ್ಮಾರ್ಟ್ ಸಿಟಿ ಅಂದ್ರೆ? ಇವರಿಗೆ ಹೇಳೋರು, ಕೇಳೋರು ಯಾರೂ ಇಲ್ವಾ? ಹೀಗೆ ಅದೆಷ್ಟು ಕಡೆ ಇವರು ಇದೇ ಥರ ಮಾಡಿರಬಹುದು ಯೋಚನೆ ಮಾಡಿ.
ಅದಕ್ಕೇ ಅಲ್ವಾ, ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾವಾದಾಗಿನಿAದ ಈಗಿನವರೆಗೂ ನಗರದ ನಾಗರಿಕರು ಇವ್ರಿಗೆ ಹಿಡಿಶಾಪ ಹಾಕ್ತಿರೋದು. ಇವ್ರು ಮಾಡಿದ್ದೇ ಸರಿ ಅಂತ ನೋಡ್ಕೊಂಡು ಕೂರೋಕೆ ಜನ ಏನು ದಡ್ರು ಅಂತ ತಿಳ್ಕೊಂಡ್ರಾ ಇವ್ರು? ಈಗಲಾದ್ರೂ ಸಂಬAಧಪಟ್ಟವರು ಈ ಬಗ್ಗೆ ಗಮನ ಹರಿಸಿ, ಸ್ಮಾರ್ಟ್ ಸಿಟಿಗೆ ಒಂದು ಅರ್ಥ ಬರುವ ಹಾಗೆ ಕಾಮಗಾರಿ ನಡೆಸಬೇಕು ಎಂದು ನಗರದ ನಾಗರಿಕರು ಎಚ್ಚರಿಕೆ ನೀಡಿದ್ದಾರೆ.