ದ್ವಿತೀಯ ಪಿಯುಸಿ ಫಲಿತಾಂಶದ ಕಂಪ್ಲೀಟ್ ಮಾಹಿತಿ

ಬೆಂಗಳೂರು : ದ್ವಿತೀಯ ಪಿಯುಸಿ ವಿದ್ಯಾರ್ಥಿ ಜೀವನದ ಬಹು ಮುಖ್ಯ ಘಟ್ಟ. ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಹೊಸ ಹೆಜ್ಜೆಯಿಡಲು ಸಿದ್ದರಾಗಿದ್ದಾರೆ. ಹಾಗಿದ್ರೆ, ಈ ಬಾರಿಯ ರಾಜ್ಯದ ಫಲಿತಾಂಶ ಹೇಗಿದೆ. ಯಾರೆಲ್ಲ ಮೇಲುಗೈ ಸಾಧಿಸಿದ್ದಾರೆ. ಅದೇ ಶಿವಮೊಗ್ಗ ಜಿಲ್ಲೆಯ ಫಲಿತಾಂಶ ಹೇಗಿದೆ ಅನ್ನೋದರ ಕುರಿತು ಇಲ್ಲಿದೆ ಒಂದು ರಿಪೋರ್ಟ್.

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯು ಏಪ್ರಿಲ್ ೨೨ರಿಂದ ಮೇ ೧೮ರವರೆಗೆ ನಡೆದಿತ್ತು ಪರೀಕ್ಷೆ ನಡೆದು ಸರಿಯಾಗಿ ಒಂದು ತಿಂಗಳಿಗೆ ಫಲಿತಾಂಶ ಪ್ರಕಟವಾಗಿದ್ದು, ಫಲಿತಾಂಶ ಏನಾಗುತ್ತೋ ಏನೋ ಎಂಬ ವಿದ್ಯಾರ್ಥಿಗಳ ಭಯ, ಗೊಂದಲಕ್ಕೆ ತೆರೆ ಬಿದ್ದಿದೆ. ಇನ್ನೇನ್ನಿದ್ದರು ಮುಂದೆ ಏನು ಮಾಡುವುದು ಎಂಬ ಯೋಚನೆ ವಿದ್ಯಾರ್ಥಿಗಳಲ್ಲಿ ಆರಂಭವಾಗಿದೆ. ಇನ್ನು ಈ ಬಾರಿಯ ಫಲಿತಾಂಶದಲ್ಲಿ ಶೇಕಡಾ ೬೧.೮೮ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಒಟ್ಟು ೬ ಲಕ್ಷದ ೮೩ ಸಾವಿರದ ೫೬೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೪ ಲಕ್ಷದ ೨೨ ಸಾವಿರದ ೯೬೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿ ಕೂಡ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಿದ್ದಾರೆ. ಶೇ.೬೮.೭೨ರಷ್ಟು ಬಾಲಕೀಯರು ಉತ್ತೀರ್ಣರಾಗಿದ್ದಾರೆ. ಅದೇ ರೀತಿ ಶೇ.೫೫.೨೨ರಷ್ಟು ಬಾಲಕರು ಪಾಸ್ ಆಗಿದ್ದಾರೆ. ಇನ್ನು ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ನಾವು ನಗರ ಭಾಗದ ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲ ಅಂತ ಪ್ರೂವ್ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಫಲಿತಾಂಶ ಶೇಕಡಾ ೬೨.೧೮ ರಷ್ಟಿದ್ದರೆ, ನಗರ ಪ್ರದೇಶದ ವಿದ್ಯಾರ್ಥಿಗಳ ಫಲಿತಾಂಶ ೬೧.೭೮ ರಷ್ಟಿದೆ. 


ಇನ್ನು ಜಿಲ್ಲಾವಾರು ಫಲಿತಾಂಶದ ಕುರಿತಾಗಿ ನೋಡೋದಾದ್ರೆ, ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಶೇಕಡಾ ೮೮.೦೨ ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಉಡುಪಿ ಜಿಲ್ಲೆಯು ಶೇಕಡಾ ೮೬.೩೮ ಫಲಿತಾಂಶವನ್ನು ಪಡೆದುಕೊಳ್ಳುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಚಿತ್ರದುರ್ಗ ಜಿಲ್ಲೆಯು ೪೯.೩೧ ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಕಡೆಯ ಸ್ಥಾನದಲ್ಲಿದೆ. ೯೧ ಸಾವಿರದ ೧೦೬ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ. ಕನ್ನಡ ವಿಷಯದಲ್ಲಿ ೫೬೩ ವಿದ್ಯಾರ್ಥಿಗಳಿಗೆ ೧೦೦ಕ್ಕೆ ೧೦೦ ಅಂಕಗಳನ್ನ ಪಡದುಕೊಂಡಿದ್ದಾರೆ. ಅದೇ ರೀತಿ ಇಂಗ್ಲಿಷ್ ವಿಷಯದಲ್ಲಿ ೨ ವಿದ್ಯಾರ್ಥಿಗಳಿಗೆ ೧೦೦ಕ್ಕೆ ೧೦೦ ಅಂಕ ದೊರೆತಿದೆ. ಗಣಿತ ವಿಷಯದಲ್ಲಿ ೧೪,೨೦೦ ವಿದ್ಯಾರ್ಥಿಗಳಿಗೆ ೧೦೦ಕ್ಕೆ ೧೦೦ ಅಂಕಗಳನ್ನು ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಫಲಿತಾಂಶ : 

ಜಿಲ್ಲಾವಾರು ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯು ೮ನೇ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲೆಯಿಂದ ಒಟ್ಟು ಹೊಸದಾಗಿ ೧೭ ಸಾವಿರದ ೩೮೯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ೧೨ ಸಾವಿರದ ೧೯೬ ವಿದ್ಯಾರ್ಥಿಗಳ ಉತ್ತೀರ್ಣರಾಗುವ ಮೂಲಕ ಜಿಲ್ಲೆಯು ಶೇಕಡಾ ೭೦.೧೪ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ. ಇದರಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಿಂತ ನಗರ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ನಗರ ಭಾಗದ ವಿದ್ಯಾರ್ಥಿಗಳು ಶೇಕಡಾ ೭೦.೪೧ ಫಲಿತಾಂಶ ಪಡೆದಿದ್ದರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ೬೯.೩೭ರಷ್ಟು ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. ರಾಜ್ಯದ ಫಲಿತಾಂಶದಂತೆಯೇ ಜಿಲ್ಲೆಯಲ್ಲಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಇನ್ನು ವಿಭಾಗ ವಿಚಾರವಾಗಿ ನೋಡೋದಾದ್ರೆ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ಇನ್ನು ವಿಭಾಗವಾರು ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಬಗ್ಗೆ ನೋಡೋದಾದ್ರೆ, ವಿಜ್ಞಾನ ವಿಭಾಗದಲ್ಲಿ ತೀರ್ಥಹಳ್ಳಿ ತಾಲೂಕಿನ ವಾಗ್ದೇವಿ ಪಿಯು ಕಾಲೇಜಿನ ವಿದ್ಯಾರ್ಥಿ ಅಭಿರಾಮ್ ಭಟ್ ಹಾಗೂ ಶಿವಮೊಗ್ಗದ ವಿಕಾಸ ಕಾಂಪೊಸಿಟ್ ಪಿಯು ಕಾಲೇಜಿನ ವಿದ್ಯಾರ್ಥಿ ನಿತೀಶ್ ಬಿ.ಎನ್ ಇಬ್ಬರೂ ಕೂಡ ೫೯೫ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ, ಶಿಕಾರಿಪುರದ ಕುಮದ್ವತಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಂಕಿತ.ಎನ್.ಈ, ಸಾಗರ ಇಂಡಿಪೆಂಡೆಂಟ್ ಕಾಲೇಜಿನ ವಿದ್ಯಾರ್ಥಿನಿ ಬಿ.ಪಿ.ಅಮೃತ ಹಾಗೂ ಕುಮದ್ವತಿ ಕಾಲೇಜಿನ ಮತೋರ್ವ ವಿದ್ಯಾರ್ಥಿ ನಿ ಖುಷಿ.ಹೆಚ್.ಎಲ್ ೫೯೪ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಕಲಾ ವಿಭಾಗದಲ್ಲಿ, ಡಿವಿಎಸ್ ಇಂಡಿಪೆಂಡೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿ, ವಿಶ್ವಾಸ್.ಎಸ್.ಎಸ್, ಮೇರಿ ಇಮ್ಯಾಕುಲೇಟ್ ಕಾಲೇಜಿನ ವಿದ್ಯಾರ್ಥಿನಿ ಸೂರ್‍ಯ.ಜಿ.ವಿ ಹಾಗೂ ಡಿವಿಎಸ್ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ಅನ್ವೇಶ.ಜೆ ೫೭೯ ಅಂಕಗಳನ್ನ ಪಡೆದುಕೊಳ್ಳುವ ಮೂಲಕ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಅಂಕಿ ಅಂಶಗಳು ಏನೆ ಇರಲಿ. ಅತಿ ಹೆಚ್ಚು ಅಂಕ ಪಡೆದೆ ಎಂದು ಹಿಗ್ಗದೆ. ನಾನು ಫೇಲ್ ಆದೆ ಅಥವಾ ಕಡಿಮೆ ಅಂಕ ಬಂತು ಅಂತ ಕುಗ್ಗದೆ ಮುನ್ನಡೆಯ ಬೇಕಷ್ಟೆ. ದ್ವಿತೀಯ ಪಿಯುಸಿ ಜೀವನದ ಒಂದ ಹಂತವಷ್ಟೆ, ಸಾಗಬೇಕಾದ ದಾರಿ ಇನ್ನು ತುಂಬ ದೂರವಿದೆ.

ನ್ಯೂಸ್ ರೂಂ ಕನ್ನಡ ಮೀಡಿಯಂ ೨೪*೭