ಈಗಾಗಲೇ ತಜ್ನರ ಜೊತೆಗೆ ಚರ್ಚಿಸಿದ್ದು, 23ರಿಂದ ಮೊದಲ ಹಂತದಲ್ಲಿ 9,10,11 ಮತ್ತು 12ನೇ ತರಗತಿವರೆಗೆ ಶಾಲಾ ಕಾಲೇಜ್ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಕೋವಿಡ್ ತೀವ್ರತೆಯನ್ನು ಪರಿಶೀಲಿಸಿ 1ರಿಂದ 8ನೇ ತರಗತಿ ವರೆಗಿನ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು
ಬೆಂಗಳೂರು, ಆ. 06: ರಾಜ್ಯಾದ್ಯಂತ ಆಗಸ್ಟ್ 23 ರಿಂದ ಶಾಲಾ ಕಾಲೇಜುಗಳು ಪ್ರಾರಂಭಗೊಳ್ಳಲಿದ್ದು ಮೊದಲ ಹಂತವಾಗಿ 9 ರಿಂದ 12ನೇ ತರಗತಿವರೆಗಿನ ಶಾಲಾ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.