ಎರಡನೇ ದಿನ ಹೇಗಿತ್ತು ಶಾಲೆಗಳ ವಾತಾವರಣ?

ಶಿವಮೊಗ್ಗ : ಕೋರ್ಟ್ ಆದೇಶದ ಬೆನ್ನೆಲ್ಲೆ ಓಪನ್ ಆದ ಪ್ರೌಢ ಶಾಲೆಗಳಲ್ಲಿ ಎರಡನೇ ದಿನವೂ ಬಿಗಿ ಬಂದೋಬಸ್ತ್‌ನೊಂದಿಗೆ ತರಗತಿಗಳು ನಡೆದವು. ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಸಂಕೇತಗಳನ್ನ ಧರಿಸದೇ ಶಾಲೆಗಳಿಗೆ ಆಗಮಿಸಿದ್ದರು.

ಆದರೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಬಂದಿದ್ರು. ಇದಕ್ಕೆ ಅವಕಾಶ ನೀಡದ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿನಿಯರನ್ನ ವಾಪಸ್ ಕಳಿಸಿತು.