ಸೋಮವಾರದಿಂದ 9, 10ನೇ ತರಗತಿಗಳು ಮರು ಆರಂಭ 

ಬೆಂಗಳೂರು : ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದದಿಂದಾಗಿ ರಜೆ ನೀಡಲಾಗಿದ್ದ 9 ಹಾಗೂ 10ನೇ ತರಗತಿಗಳು ಸೋಮವಾರದಿಂದ ಮತ್ತೆ ಆರಂಭವಾಗಲಿವೆ. ಸಮವಸ್ತ್ರ ನಿಯಮವನ್ನ ಕಡ್ಡಾಯವಾಗಿ ಪಾಲಿಸಬೇಕು. ಹಿಜಾಬ್, ಕೇಸರಿ ಶಾಲು ಸೇರಿದಂತೆ ಯಾವುದೇ ಧಾರ್ಮಿಕ ಸಂಕೇತಗಳನ್ನ ಧರಿಸುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಕೋರ್ಟ್‌ನ ಈ ಆದೇಶವನ್ನ ಜಾರಿಗೆ ತರಲು ಜಿಲ್ಲಾಡಳಿತಗಳು ಸಕಲ ಸಿದ್ಧತೆ ನಡೆಸಿವೆ. ಸೋಮವಾರ ಶಾಲೆಗಳು ಆರಂಭವಾಗುವುದರಿಂದ ಹಿಜಾಬ್ ಸವಾಲು ಹೇಗಿರುತ್ತದೆ ಎಂದು ಯಾರಿಗೂ ಸ್ಪಷ್ಟವಿಲ್ಲ. ಹೀಗಾಗಿ ಕಟ್ಟೆಚ್ಚರ ವಹಿಸಬೇಕೆಂದು ಸರ್ಕಾರ ಜಿಲ್ಲಾಡಳಿತಕ್ಕೆ ಸೂಚಿಸಿದೆ.