ವಾರದ ಬಳಿಕ ಶಾಲಾ-ಕಾಲೇಜುಗಳು ಪುನಾರಂಭ 

ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ರಜೆ ನೀಡಲಾಗಿದ್ದ ಶಿವಮೊಗ್ಗ ನಗರದ ಶಾಲಾ-ಕಾಲೇಜುಗಳು ಪುನಾರಂಭವಾಗಿವೆ. ಈ ಮೊದಲು ಶನಿವಾರವೇ ಆರಂಭ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿತ್ತು.

ಆದರೆ ಪರಿಸ್ಥಿತಿ ಅವಲೋಕಿಸಿ ಸೋಮವಾರ ಆರಂಭ ಮಾಡಲು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಸೂಚಿಸಿದ್ದರು. ಕೊನೆಗೂ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ನಾನಾ ಕಾರಣಕ್ಕೆ ಸಾಲು ಸಾಲು ರಜೆ ಪಡೆದು ಮನೆಯಲ್ಲಿದ್ದ ವಿದ್ಯಾರ್ಥಿಗಳು ಮತ್ತೆ ಶಾಲಾ-ಕಾಲೇಜುಗಳಿಗೆ ತೆರಳಿದ್ದಾರೆ.