ಸವಧರ್ಮ ಸಮನ್ವಯ ಜಾಥ 

ಶಿವಮೊಗ್ಗ :  ಜನರಲ್ಲಿ ಶಾಂತಿ ಸೌರ್ಹಾರ್ದತೆ ಮೂಡಿಸುವ ಸಲುವಾಗಿ ಹಾಗೂ ಎಲ್ಲ ಧರ್ಮದ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಆಮ್ ಆದ್ಮಿ ಪಕ್ಷದಿಂದ ಸರ್ವಧರ್ಮ ಸಮನ್ವಯ ಜಾಥಾ ನಡೆಯಿತು.

ಖಾಸಗಿ ಬಸ್ ನಿಲ್ದಾಣದಿಂದ ಆರಂಭವಾದ ಜಾಥ, ಶಿವಪ್ಪ ನಾಯಕ ವೃತ್ತ ತಲುಪಿ ಆನಂತರ ನೆಹರು ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಬಳಿಕ, ಶಿವಮೊಗ್ಗ ಜಿಲ್ಲೆಯಲ್ಲಿ ಕೋಮು ಸಂಘರ್ಷಕ್ಕೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಇಂತಹ ಸಮಾಜ ಘಾತುಕ ಶಕ್ತಿಗಳನ್ನು ಗುರುತಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಆಮ್ ಆದ್ಮಿ ಪಕ್ಷದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿಲಾಗಿದೆ.