ತೀರ್ಥಹಳ್ಳಿಯಲ್ಲಿ ಆರಂಭವಾಗಲಿದೆ ಸೈನಿಕ ಶಾಲೆ: ಬಿವೈಆರ್

 ಶಿವಮೊಗ್ಗ : ಜಿಲ್ಲೆಯಲ್ಲಿ ಆಗಬೇಕಿರುವ ವಿವಿಧ ರೈಲ್ವೆ ಕಾಮಗಾರಿ ಯೋಜನೆ ಹಾಗೂ ವಿವಿಧ ಯೋಜನೆಗಳ ಕುರಿತಾಗಿ ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದ್ರು.

ನೂತನ ಜಿಲ್ಲಾ ಉಸ್ತುವಾರಿ ಸಚಿವರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡದ ಸಂಸದರು, ಮಲೆನಾಡು ಮತ್ತು ಉತ್ತರ ಕರ್ನಾಟಕಕ್ಕೆ ಸೇತುವೆಯಾಗಿ ಕೆಲಸ ಮಾಡುವ ನ್ಯೂ ರೈಲ್ವೆ ಲೈನ್‌ಗೆ ಕಳೆದ ವರ್ಷದ ಬಜೆಟ್‌ನಲ್ಲಿಯೇ ೨೫೦ ಕೋಟಿ ರೂಪಾಯಿ ಇಡಲಾಗಿತ್ತು. ಆದ್ರೆ ಟೆಂಡರ್ ಪ್ರಕ್ರಿಯೆ ಕಾರಣದಿಂದಾಗಿ ನಾವು ಆ ಹಣವನ್ನ ಬಳಸಿಕೊಳ್ಳಲು ಆಗಲಿಲ್ಲ. ತೀರ್ಥಹಳ್ಳಿಗೆ ಸೈನಿಕ ಶಾಲೆಯ ಪ್ರಫೋಸಲ್ ಇನ್ನೂ ಎರಡು ಮೂರು ದಿನಗಳಲ್ಲಿ ಕೇಂದ್ರಕ್ಕೆ ತಲುಪುತ್ತೆ. ರಾಜನಾಥ್ ಸಿಂಗ್ ಅವರು ನೂರಕ್ಕೆ ನೂರು ಕೊಡ್ತೀವಿ ಎಂದು ಹೇಳಿದ್ದಾರೆ. ಇದಕ್ಕಾಗಿ ತೀರ್ಥಹಳ್ಳಿಯಲ್ಲಿ 100 ಎಕರೆ ಜಾಗ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.