ಶಿವಮೊಗ್ಗ: ೧೯೪೧ರಲ್ಲಿ ಆರಂಭವಾದ ಸಹ್ಯಾದ್ರಿ ಕಾಲೇಜಿಗೆ ಈಗ ಎಂಭತ್ತರ ಸಂಭ್ರಮ. ಹಾಗಾಗಿ ಅಕ್ಟೋಬರ್ ೯ರಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಸಹ್ಯಾದ್ರಿ ಕಾಲೇಜು ಹಳೇ ವಿದ್ಯಾರ್ಥಿ ಸಂಘ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಮುಖರು, ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಹಳೆಯ ನೆನಪು ಸವಿಯುವ ಜೊತೆಗೆ ವಿದ್ಯೆ ಕಲಿಸಿ ನಿವೃತ್ತರಾದ ಗುರುಗಳಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ. ಹೊಸದಾಗಿ ರಚಿತವಾದ ಸಂಘಕ್ಕೆ ಎಲ್ಲಾ ಹಳೆಯ ವಿದ್ಯಾರ್ಥಿಗಳು ಸೇರಬೇಕು. ನಾಡಿಗೆ ಮತ್ತು ದೇಶಕ್ಕೆ ಸಹಸ್ರಾರು ಖ್ಯಾತನಾಮರನ್ನು ಈ ಕಾಲೇಜು ನೀಡಿದೆ. ಈಗಿನ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳೊಂದಿಗೆ ಒಗ್ಗೂಡಿಸಿ ಸಲಹೆ, ಸೂಚನೆ ನೀಡಲಿದ್ದೇವೆ. ವೃತ್ತಿಪರ ಕೋರ್ಸ್ ಬಯಸುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಹ ಕೊಡಲಾಗುವುದು ಎಂದರು.
ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಮಾತನಾಡಿ, ಖೇಲೋ ಇಂಡಿಯಾ ಬಗ್ಗೆ ನಮ್ಮ ನಿರ್ದಾರ ಏನೂ ಇಲ್ಲ. ವಿದ್ಯಾರ್ಥಿಗಳ ಅಭ್ಯುದಯಕ್ಕೆ ಗಮನ ಕೊಡುತ್ತೇವೆ ಹೊರತು ಅದರ ಬಗ್ಗೆ ಅಲ್ಲ. ಚರ್ಚೆ ವೇಳೆ ನೋಡೋಣ ಎಂದರು.