ಸಹ್ಯಾದ್ರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮಳೆ ಬಂದ್ರೆ ವಿದ್ಯಾರ್ಥಿಗಳಗೆ ಫಜೀತಿ

ಶಿವಮೊಗ್ಗ : ಮಳೆ ಜೋರಾಗಿ ಬರಲು ಶುರುವಾಯ್ತು ಅಂದ್ರೆ ಸಹ್ಯಾದ್ರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಆತಂಕ ಶುರುವಾಗುತ್ತೆ. ಮಳೆ ನೀರು ಹಾಸ್ಟಲ್ ಒಳಗೆ ನುಗ್ಗಿ ಭಾರಿ ಅವಾಂತರವನ್ನೇ ಸೃಷ್ಟಿ ಮಾಡ್ತಾಯಿದೆ.

ವಿದ್ಯಾರ್ಥಿಗಳ ರೂಂಗಳಿಗೂ ನೀರು ನುಗ್ತಾಯಿದ್ದು ಸಮಸ್ಯೆಯಾಗ್ತಾಯಿದೆ. ರಾತ್ರಿ ವೇಳೆಯಲ್ಲಿ ಓದಿಕೊಳ್ಳಬೇಕಾದ ವಿದ್ಯಾರ್ಥಿಗಳು ಮಳೆ ನೀರು ರೂಂ ಬಾರದಂತೆ ತಡೆಯಲು ಸಾಹಸ ಪಡುವಂತಾಗಿದೆ.

ಹೊಸದಾಗಿ ನಿರ್ಮಾಣವಾಗಿರುವ ಕಟ್ಟದಲ್ಲಿಯೇ ಈ ಸಮಸ್ಯೆಯಾಗಿದ್ದು, ಹಾಸ್ಟೆಲ್ ಕಾಮಗಾರಿಯ ಗುಣಮಟ್ಟ ಎಷ್ಟಿರಬಹುದೆಂದು ಪ್ರಶ್ನೆ ಮೂಡುವಂತಾಗಿದೆ.