ಸಾಗರ : ಸರ್ಕಾರಿ ಕಚೇರಿಗಳಲ್ಲಿರುವ ಕೆಲ ಅಧಿಕಾರಿಗಳಿಗೆ ಅಲ್ಲಿಗೆ ಬರುವ ಜನರನ್ನು ಕಂಡರೆ ಒಂದು ರೀತಿಯ ನಿರ್ಲಕ್ಷ್ಯ. ಯಾವುದೇ ಕೆಲಸವನ್ನಾಗಲಿ ತ್ವರಿತಗತಿಯಲ್ಲಿ ಮಾಡದೇ ವಿಳಂಬ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.
ಇದೇ ರೀತಿಯ ಕೆಲಸ ಸಾಗರದ ನಗರಸಭೆಯಲ್ಲಿ ಕೂಡ ನಡೀತಾಯಿದೆ. ಈ ಹಿನ್ನೆಲೆ ಶಾಸಕ ಹರತಾಳು ಹಾಲಪ್ಪ ಕಚೇರಿಗೆ ಧಿಡೀರ್ ಭೇಟಿ ನೀಡಿ, ಈ-ಸ್ವತ್ತು ದಾಖಲೆ ನೀಡಲು ವಿಳಂಬ ಮಾಡುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತ್ವರಿತವಾಗಿ ಸಾರ್ವಜನಿಕರಿಗೆ ಸೇವೆ ಒದಗಿಸುವಂತೆ ಖಡಕ್ಕಾಗಿ ಸೂಚಿಸಿದ್ದಾರೆ.