ಸಾಗರ : ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬ ಮಾತು ಪುನೀತ್ ರಾಜ್‌ಕುಮಾರ್‌ಗೆ ಯಾವಾಗಲೂ ಅನ್ವಯವಾಗುತ್ತದೆ. ಅಪ್ಪು ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ ಅವರ ಮೇಲಿನ ಅಭಿಮಾನ ಅಭಿಮಾನಿಗಳಲ್ಲಿ ಕಿಂಚಿತ್ತು ಕಡಿಮೆಯಾಗಿಲ್ಲ.
ಹೌದು, ಸಾಗರದ ಶ್ರೀ ಮಹಾಗಣಪತಿ ಜಾತ್ರೆಯಲ್ಲಿ ಅಭಿಮಾನಿಗಳು ಅಪ್ಪು ಫೋಟೊ ಹಿಡಿದು ರಥೋತ್ಸವದಲ್ಲಿ ಭಾಗಿಯಾಗಿದ್ದಾರೆ. ಹಾಗೂ ಮತ್ತೆ ಹುಟ್ಟಿ ಬನ್ನಿ ಅಪ್ಪು ಎಂದು ರಥಕ್ಕೆ ಬಾಳೆಹಣ್ಣು ಎಸೆದು ಪ್ರಾರ್ಥಿಸಿದ್ದಾರೆ. ಅಂದ್ಹಾಗೆ, ಈ ಹಿಂದೆ ಶಿವಮೊಗ್ಗದ ದುರ್ಗಮ್ಮ ಜಾತ್ರೆಯಲ್ಲಿಯೂ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಫೋಟೊ ಹಿಡಿದು ರಥೋತ್ಸವದಲ್ಲಿ ಭಾಗಿಯಾಗಿದ್ದರು.