ಶರಾವತಿ ಹಿನ್ನೀರಲ್ಲಿ ಪಾರ್ಟಿ ಮಾಡ್ತಿದ್ದವರಿಗೆ ಪೊಲೀಸರ ಪಾಠ

ಸಾಗರ : ಸಾಗರ ತಾಲೂಕಿನ ಯಡಜಿಗಳಮನೆ ಪಂಚಾಯಿತಿ ವ್ಯಾಪ್ತಿಯ ಕೆಸವಿನಮನೆ ಸಮೀಪ ಬರುವ ಶರಾವತಿ ಹಿನ್ನೀರಿನ ದಡದಲ್ಲಿ ದೊಡ್ಡ ಪಾರ್ಟಿ ನಡೆದಿದೆ. ಈ ವೇಳೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು, ಪಾರ್ಟಿ ಮಾಡ್ತಿದ್ದವರಿಗೆ ಪಾಠ ಮಾಡಿದ್ದಾರೆ.

ಈ ಪಾರ್ಟಿ ಕೇವಲ ಒಂದು ಉದಾಹರಣೆ ಅಷ್ಟೆ. ಈ ಭಾಗವಲ್ಲದೆ ಶರಾವತಿ ಹಿನ್ನೀರಿನ ಹಲವು ಜಾಗಗಳು ಮೋಜು ಮಸ್ತಿಯ ತಾಣಗಳಾಗಿ ಮಾರ್ಪಟ್ಟಿವೆ. ಅರಣ್ಯ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಯಾರಾದರೂ ವಾಹನ ನಿಲ್ಲಿಸಿದರೂ ಪ್ರಶ್ನೆ ಮಾಡುತ್ತದೆ. ಆದರೆ ಕಾಡಿನ ನಡುವೆ ಬರೋ ರಸ್ತೆಯ ಬದಿಯಲ್ಲಿ ಎಣ್ಣೆ ಬಾಟಲಿಗಳು ಎಲ್ಲಿಂದ ಬರುತ್ತವೆ ಎಂಬುದನ್ನು ಯಾರಿಗೆ ಕೇಳಬೇಕು? ಹೀಗಾಗಿ ಸುಂದರ ಪ್ರಕೃತಿ ತಾಣವನ್ನ ಮೋಜು ಮಸ್ತಿಗೆ ಬಳಸಿ ಹಾಳು ಮಾಡುವುದನ್ನ ತಡೆಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.