ಸಾಗರ : ಇಲ್ಲಿನ ಆರ್‌ಟಿಒ ಕಚೇರಿಯಲ್ಲಿನ ಟ್ರಯಲ್ ಟ್ರ್ಯಾಕ್‌ನಲ್ಲಿ ವಾಹನ ಓಡಿಸಿ ಡಿಎಲ್ ಪಡೆದುಕೊಂಡವರು, ಎಂಥಹ ಗುಡ್ಡಗಾಡಿನ ರಸ್ತೆಯಲ್ಲಿ ಕೂಡ ವಾಹನ ಚಾಲಾಯಿಸಬಲ್ಲರು.
ಇಲ್ಲಿನ ಟ್ರಯಲ್ ಟ್ರ್ಯಾಕ್‌ಗೂ ಅಥವಾ ಯಾವುದೋ ಗುಡ್ಡಗಾಡಿನ ರಸ್ತೆಗೂ ಕಿಂಚಿತ್ತು ವ್ಯತ್ಯಾಸ ಇಲ್ಲ. ಟ್ರ್ಯಾಕ್ ಸಂಪೂರ್ಣವಾಗಿ ಹಾಳಾಗಿದ್ದು, ಸಾಕಷ್ಟು ಹೊಂಡ, ಗುಂಡಿಗಳಿವೆ. ಟ್ರ್ಯಾಕ್ ಬದಿಯಲ್ಲಿ ಉದ್ದವಾಗಿ ಹುಲ್ಲುಗಳು ಬೆಳದಿವೆ. ಸೂಚನಾ ಫಲಕಗಳು ನೆಲಕ್ಕೆ ಬಿದ್ದು ಭೂ ತಾಯಿಯ ಮಡಿಲು ಸೇರಿವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಳಿದರೆ ಸದ್ಯದಲ್ಲಿಯೇ ಸರಿಪಡಿಸಲಾಗುವುದು ಎಂದು ಹೇಳ್ತಾಯಿದಾರೆ. ಆದೇನೆ ಇದ್ರು ಆದಷ್ಟು ಬೇಗ ಈ ಅವ್ಯವಸ್ಥೆ ಸರಿಯಾಗಿ, ವಾಹನ ಚಾಲಕರು ಈ ಕಠಿಣ ಪರೀಕ್ಷೆಯಿಂದ ಬಚಾವ್ ಆದ್ರೆ ಸಾಕು.