ಸಾಗರ : ಇಲ್ಲಿನ ಮಾರಿಕಾಂಬ ಜಾತ್ರೆಯ ಸಭೆ ಗದ್ದಲ, ಗಲಾಟೆಗಳಿಗೆ ಕಾರಣವಾಗಿದೆ. ಈ ಸಭೆಯಲ್ಲಿ ಮಾರಿಕಾಂಬ ಸಮಿತಿಯ ಸದಸ್ಯರು ಮಾತ್ರ ಇರಬೇಕು. ಆದ್ರೆ ಈ ಸಭೆಯಲ್ಲಿ ಸದಸ್ಯರಲ್ಲದವರನ್ನೂ ಕೂಡ ಒಳಗೆ ಬಿಟ್ಟುಕೊಳ್ಳಲಾಗಿದೆ ಎಂದು ಆರೋಪಿಸಿ ಸಾಗರದ ಯುವಕರು ಪ್ರತಿಭಟನೆ ನಡೆಸಿದ್ದಾರೆ.
ಸಭೆ ನಡೆಯುತ್ತಿದ್ದ ಜಾಗದಲ್ಲಿ ಪ್ರತಿಭಟನಾಕಾರರು ಸಮಿತಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು ಇಲ್ಲಿಗೆ ಬರಬೇಕೆಂದು ಪಟ್ಟು ಹಿಡಿದರು.