ಶಿವಮೊಗ್ಗ : ವಿಮಾನ ನಿಲ್ದಾಣದ ರನ್ ವೇ ಕಾಮಗಾರಿಯು ಮೇ ಅಥವಾ ಜೂನ್‌ನಲ್ಲಿ ಪೂರ್ಣವಾಗಲಿದೆ. ಟರ್ಮಿನಲ್ ಕಾಮಗಾರಿ ಜುಲೈನಲ್ಲಿ ಮುಗಿಯಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಈ ಕುರಿತು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲದ್ದಕಿಂತ ಮೇಂಟನೆನ್ಸ್ ಯಾರು ಮಾಡಬೇಕೆಂದು ಚರ್ಚೆಯಾಗುತ್ತದೆ. ಈ ಕುರಿತು ಮುಂದಿನ ವಾರ ನಿರ್ಧಾರ ತೆಗೆದುಕೊಳ್ಳಲಾಗುವುದು. ಡಿಸೆಂಬರ್ ಅಂತ್ಯದೊಳಗೆ ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆ ಇದೆ. ಶೀಘ್ರದಲ್ಲೇ ಯಾವ ಯಾವ ನಗರಗಳಿಗೆ ವಿಮಾನಯಾನ ಸೇವೆ ಲಭ್ಯವಿದೆ ಅನ್ನೋದು ತಿಳಿಯಲಿದೆ ಎಂದು ಮಾಹಿತಿ ನೀಡಿದರು.