ಶಿವಮೊಗ್ಗ : ಒಬ್ಬ ಶಾಸಕ ಪರಿಶೀಲನೆಗೆ ಬಂದರೆ ಎಂಜಿನಿಯರ್‌ಗಳು ಎಲ್ಲೋ ನಿಂತು ಮಾತನಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಗರಂ ಆಗಿದ್ದಾರೆ. ನವುಲೆ ಭಾಗದಲ್ಲಿ, ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗಾಗಿ ನಿರ್ಮಿಸಲಾಗುತ್ತಿರುವ ಸಮುಚ್ಚಯ ಮನೆಗಳ ಕಾಮಗಾರಿಯನ್ನ ರುದ್ರೇಗೌಡ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಒಂದೊಂದು ಮನೆಗೆ ಹತ್ತೂವರೆ ಲಕ್ಷ ರೂಪಾಯಿ ವೆಚ್ಚದಂತೆ ೧೬೮ ಮನೆಗಳನ್ನ ಪೌರ ಕಾರ್ಮಿಕರಿಗಾಗಿ ನಿರ್ಮಿಸಲಾಗ್ತಾಯಿದೆ. ಆದ್ರೆ ಈ ಮನೆಗಳ ಕಾಮಗಾರಿಗಳು ಅಷ್ಟೊಂದು ಸಮಂಜಸವಾಗಿಲ್ಲ. ಈ ಕುರಿತಾಗಿ ಎಂಜಿನಿಯರ್‌ಗಳನ್ನ ಕೇಳಿದರೆ ಅವರು ಕಂಟ್ರಾಕ್ಟರ್‌ಗಳು ನಮ್ಮ ಮಾತು ಕೇಳ್ತಾಯಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈ ವಿಚಾರವನ್ನ ಕಮೀಷನರ್ ಗಮನಕ್ಕೆ ಕೂಡ ತಂದಿದ್ದೇನೆ ಎಂದು ಹೇಳಿದರು.