ಪೊಲೀಸರಿಂದ ರೂಟ್ ಮಾರ್ಚ್ 

ಶಿವಮೊಗ್ಗ : ನಗರದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದು, ನಗರದಲ್ಲಿ ಶಾಂತಿ ವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸರು ರೂಟ್ ಮಾರ್ಚ್ ನಡೆಸಿದ್ದಾರೆ. ಬೆಳಗ್ಗೆಯೇ ಪ್ರಾರಂಭವಾದ ರೂಟ್ ಮಾರ್ಚ್ ಸೈನ್ಸ್ ಮೈದಾನದಿಂದ ಪ್ರಾರಂಭವಾಗಿ ಕರ್ನಾಟಕ ಸಂಘ, ಅಮೀರ್ ಅಹಮದ್ ಸರ್ಕಲ್, ಬಿ.ಹೆಚ್. ರಸ್ತೆ ಹಾಗೂ ಅಶೋಕ ಸರ್ಕಲ್ ಮುಖಾಂತರ ಡಿಎಆರ್ ಪೊಲೀಸ್ ಮೈದಾನದಲ್ಲಿ ಅಂತ್ಯವಾಯಿತು.