ಮಳೆಯಲ್ಲಿ ಮುಳುಗಿದ್ದ ಆರ್‌ಎಂಎಲ್ ನಗರ : ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ

ಶಿವಮೊಗ್ಗ :  ಸುರಿದ ಮಳೆಗೆ ನಗರದ ಬಹುತೇಕ ಬಡಾವಣೆಗಳು ಮುಳುಗಡೆಯಾಗಿದ್ದವು. ಅದರಲ್ಲೂ ಆರ್‌ಎಂಎಲ್ ನಗರವೊಂತು ಸಂಪೂರ್ಣವಾಗಿ ಜಲಾವೃತವಾಗಿ ಹೋಗಿತ್ತು. ಅಲ್ಲಿನ ರಾಜಕಾಲುವೆ ಹಾಗೂ ರಸ್ತೆಗಳ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ.

ಇದರಿಂದಾಗಿ ಜನ ಸಮಾನ್ಯರು ಪರದಾಡುವಂತಾಗಿದೆ ಎಂದು ಆರ್‌ಎಂಎಲ್ ನಗರ ನಾಗರೀಕ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಕಾಮಗಾರಿಗಳನ್ನು ಸರಿಯಾದ ರೀತಿಯಲ್ಲಿ, ಸೂಕ್ತ ಸಮಯದಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.