ನಾಗರೀಕ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ 

ಶಿವಮೊಗ್ಗ : ವಿವಿಧ ಸಮಸ್ಯೆಗಳನ್ನ ಬಗೆಹರಿಸುವಂತೆ ಆರ್‌ಎಂಎಲ್ ನಗರದಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ. ಈ ವೇಳೆ ಮಾತನಾಡಿದ ನಾಗರೀಕ ಹಿತ ರಕ್ಷಣಾ ವೇದಿಕೆ ಕಾರ್ಯದರ್ಶಿ ಅಶೋಕ್ ಕುಮಾರ್, ಇಲ್ಲಿ ರಾಜಕಾಲುವೆ ನೀರು ಮೂರು ಕಡೆಯಿಂದ ಬರುತ್ತೆ. ರಾಜಕಾಲುವೆ ಮುಂದೆ ಹೋದಂತೆ ಕಿರಿದಾಗಿದೆ. ಹೀಗಾಗಿ ಇದರಲ್ಲಿ ನೀರು ಸರಿಯಾಗಿ ಹೋಗ್ತಾಯಿಲ್ಲ. ಎರಡು ಮೂರು ವರ್ಷಗಳಿಂದ ಪ್ಲಾಸ್ಟೀಕ್ ವೇಸ್ಟೇಜ್ ಹಾಗೇ ಬಿದ್ದಿದೆ. 50 ಲಕ್ಷ ರೂಪಾಯಿಯನ್ನ ಇಲ್ಲಿನ ಪಾರ್ಕಿಗೆಂದು ನೀಡಲಾಗಿತ್ತು. ಆದ್ರೆ ಪಾರ್ಕ್ ದುಸ್ಥಿತಿಯನ್ನ ತಲುಪಿದೆ ಎಂದು ಆರೋಪಿಸಿದರು.