ದೇಶದಲ್ಲಿ ವಾಸಿಸುವುದಕ್ಕೆ ನಾಲಾಯಕ್ 

ಬೆಂಗಳೂರು : ಈ ನೆಲದ ಕಾನೂನನ್ನು ಗೌರವಿಸಬೇಕು. ಇಲ್ಲವಾದಲ್ಲಿ ನೀವು ಈ ದೇಶದಲ್ಲಿ ವಾಸಿಸುವುದಕ್ಕೆ ನಾಲಾಯಕ್ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಹಿಜಾಬ್ ತೀರ್ಪು ಬೆನ್ನೆಲ್ಲೆ ತೀರ್ಪನ್ನು ವಿರೋಧಿಸಿ ಗುರುವಾರ ನಡೆಸಲಾಗಿದ್ದ ಬಂದ್ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ದೇಶದ ಅನ್ನ, ಗಾಳಿಯ ಋಣವಿದ್ದರೂ ಕೂಡ ಕಾನೂನಿನ ವಿರುದ್ಧವಾಗಿಯೇ ಬಂದ್‌ಗೆ ಕರೆ ಕೊಡುತ್ತಾರೆ. ಮುಗ್ದ ವಿದ್ಯಾರ್ಥಿನಿಯರಿಗೆ ಪ್ರಚೋಧನೆ ಮಾಡಿ, ಅವರ ವಿದ್ಯಾಭ್ಯಾಸವನ್ನು ಹಾಳು ಮಾಡಿದ್ದಾರೆ. ಈ ಎಲ್ಲವುಗಳ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಯಾರು ಈ ದೇಶದ ಕಾನೂನಿಗೆ ಗೌರವ ನೀಡುವುದಿಲ್ಲವೋ ಅಂತವರು ತಮಗೆ ಇಷ್ಟವಾದ ದೇಶಕ್ಕೆ ಹೋಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.