ಬೆಂಗಳೂರು : ಬೆಳಗಾವಿಯಲ್ಲಿ ಗುತ್ತಿಗಾರರೊಬ್ಬರ ಬಳಿ ಗ್ರಾಮೀಣಾಶಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಲಂಚ ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರೆಯೆ ನೀಡಿದ್ದು, ಈ ಎಲ್ಲಾ ಆರೋಪಗಳು ಆಧಾರ ರಹಿತವಾಗಿವೆ. ಕಾಂಗ್ರೆಸ್‌ನವರು ಈ ರೀತಿ ಪ್ರಚೋದನೆ ನೀಡಿ, ನಮ್ಮ ಸರ್ಕಾರ ಹಾಗೂ ಸಚಿವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಾಯಿದೆ.
ಸಚಿವರು ತಮ್ಮ ಇಲಾಖೆಗೆ ಬಂದ ಎಲ್ಲಾ ಅನುದಾನವನ್ನು ಪಾರದರ್ಶಕವಾಗಿ ಎಲ್ಲಾ ಕ್ಷೇತ್ರಗಳಿಗೂ ಹಂಚಿಕೆ ಮಾಡಿದ್ದಾರೆ. ಈಶ್ವರಪ್ಪ ಸಂಘಟನೆಯಿಂದ ಬಂದ ವ್ಯಕ್ತಿ. ಅವರು ಪರಿಶುದ್ಧರು. ನಾನು ಈ ಆರೋಪವನ್ನು ಅಲ್ಲಗಳಿಯುತ್ತೇನೆ ಎಂದರು.