ಕೆ.ಎಸ್.ರವಿಕುಮಾರ್ ಮತಯಾಚನೆ

ಶಿವಮೊಗ್ಗ : ಡಿಸೆಂಬರ್ ೧೨ರಂದು ನಡೆಯಲಿರುವ ರಾಜ್ಯ ಒಕ್ಕಲಿಗ ಸಂಘದ ಚುನಾವಣೆಯಲ್ಲಿ ರಾಜ್ಯ ಒಕ್ಕಲಿಗ ಸಂಘದ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಕೆ.ಎಸ್.ರವಿಕುಮಾರ್ ಸ್ಪರ್ಧಿಸಿದ್ದಾರೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ಹಾಗೂ ಸಮಾಜ ಬಾಂಧವರು ಅತ್ಯಂತ ಶ್ರಮ ವಹಿಸಿ ರಾಜ್ಯ ಒಕ್ಕಲಿಗ ಸಂಘವನ್ನ ಕಟ್ಟಿ ಬೆಳೆಸಿ ಸಮಾಜದವರಿಗೆ ಸಾಕಷ್ಟು ಸೌಲಭ್ಯಗಳನ್ನ ಸೃಷ್ಟಿಸಿದ್ದಾರೆ. ಆದರೆ ಈ ಸೌಲಭ್ಯಗಳು ಶಿವಮೊಗ್ಗ ಜಿಲ್ಲಾ ಬಾಂಧವರಿಗೆ ಸರಿಯಾಗಿ ತಲುಪುತ್ತಿಲ್ಲ. ಹೀಗಾಗಿ ರಾಜ್ಯ ಸಂಘದಲ್ಲಿ ದೊರೆಯಬಹುದಾದ ಎಲ್ಲಾ ಸೌಲಭ್ಯವನ್ನು ಜಿಲ್ಲೆಯ ಸಮಾಜ ಬಾಂಧವರಿಗೆ ದೊರಕಿಸಿಕೊಡುವುದರೊಂದಿಗೆ ಇನ್ನೂ ಕೆಲವು ಸಮಾಜದ ಕಾರ್ಯಗಳನ್ನ ಮಾಡುವ ಉದ್ದೇಶದಿಂದ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಹೀಗಾಗಿ ತಾವುಗಳು ನನಗ ಮತನೀಡಿ ಸಮಾಜ ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ವಿನಂತಿ ಮಾಡಿಕೊಂಡರು.