ಶಿವಮೊಗ್ಗ : ಶಿವಮೊಗ್ಗ ರಂಗಾಯಣ ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಮೂರು ತಿಂಗಳ ರಂಗಶಿಕ್ಷಣ ಸರ್ಟಿಫಿಕೇಟ್ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಂಗ ಪಠ್ಯಗಳನ್ನ ಸೇರಿಸಿ ತಯಾರಿಸಿದ ಪುಸ್ತಕ ಬಿಡುಗಡೆಯಾಗಿದೆ.
ಈ ವೇಳೆ ಮಾತನಾಡಿದ ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ್ ಜವಳಿ, ಯುವ ಜನರನ್ನ ರಂಗಭೂಮಿಯ ಕಡೆಗೆ ಸೆಳೆಯಬೇಕು ಹಾಗೂ ರಂಗಭೂಮಿಯ ಕುರಿತಾಗಿ ಆಸಕ್ತಿ ಮೂಡಿಸಬೇಕು. ಈ ಕಾರಣದಿಂದಾಗಿ ಮೂರು ತಿಂಗಳ ರಂಗ ಶಿಕ್ಷಣ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿದ್ದು, ಇಲ್ಲಿ ಕಲಿಯುತ್ತಿರುವ ರಂಗಾಸಕ್ತರಿಗೆ ಅನುಕೂಲವಾಗುವಂತೆ ರಂಗಪಠ್ಯಗಳನ್ನೊಳಗೊಂಡ ಪುಸ್ತಕ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.