ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನಿಟ್ಟ ರಾಜ್ಯ ರೈತಸಂಘ

ಶಿವಮೊಗ್ಗ : ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಹಾಗೂ ಅವರು ಮುಖಕ್ಕೆ ಮಸಿ ಬಳಿದ ಘಟನೆಯು ಸರ್ಕಾರದ ಭದ್ರತಾ ವೈಫಲ್ಯವನ್ನು ಬಿಂಬಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಮುಂದೆ ಹಲವು ಪ್ರಶ್ನೆಗಳನ್ನು ಇಡಲಾಗಿದೆ.

ಕಳೆದ ಒಂದು ವಾರದಲ್ಲಿ ಮಾಧ್ಯಮಗಳು ಭಿತ್ತರಿಸಿದಸ ಸುದ್ದಿ ಸರ್ಕಾರದ ಗಮದಲ್ಲಿ ಇಲ್ಲವೇ?, ರಾಷ್ಟ್ರೀಯ ರೈತ ನಾಯಕರು ಕರ್ನಾಟಕದ ಸಭೆಗೆ ಬರುವ ಮಾಹಿತಿ ಇರಲಿಲ್ಲವೇ?, ಭದ್ರತಾ ವೈಪಲ್ಯಕ್ಕೆ ಕಾರಣಗಳೇನು?, ಸಭೆಗೆ ಪೊಲೀಸ್ ಭದ್ರತೆ ಒದಗಿಸಲು ಸರ್ಕಾರಕ್ಕಿದ್ದ ತೊಂದೆಗಳೇನು? ಎನ್ನುವ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳಿಲಾಗಿದ್ದು ಶೀಘ್ರವಾಗಿ ಇದಕ್ಕೆ ಉತ್ತರಿಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.